ಸುಳ್ಯ:ಕೇಂದ್ರ ಸರಕಾರವು ಉದ್ಯೋಗ ಖಾತರಿ ಯೋಜನೆಯ ಹೆಸರು ಮತ್ತು ನಿಯಮ ಬದಲಾವಣೆ ಮಾಡುವ ಮೂಲಕ ಕಾರ್ಮಿಕರ ಕೆಲಸವನ್ನು ಕಿತ್ತುಕೊಳ್ಳುವ ಪ್ರಯತ್ನವನ್ನು ಮಾಡುತಿದೆ ಎಂದು ಕಟ್ಟಡ ಮತ್ತು ಇತರರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿರ್ದೇಶಕ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಕೆ.ಪಿ.ಜಾನಿ ಕಲ್ಲುಗುಂಡಿ ಹೇಳಿದ್ದಾರೆ. ಸರಕಾರದ ಈ ಕ್ರಮದ ವಿರುದ್ಧ
ಕಾಂಗ್ರೆಸ್ ವತಿಯಿಂದ ರಾಜ್ಯದಾದ್ಯಂತ ಹೋರಾಟ ಮತ್ತು ಚಳುವಳಿ ನಡೆಸಲಾಗುವುದು ಎಂದು ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು. ಇದು ಕಾಂಗ್ರೆಸ್ನ ಕನಸಿನ ಯೋಜನೆ ಡಾ.ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ದೇಶದ ಪ್ರತಿಯೊಬ್ಬ ಕಾರ್ಮಿಕರುಗೂ ಉದ್ಯೋಗ ನೀಡಿ ಜೀವನ ನಿರ್ವಹಣೆಗೆ 100 ದಿನಗಳ ಕೂಲಿ ನೀಡಲಾಗುತ್ತಿತ್ತು. ಇದು ದೇಶದಾದ್ಯಂತ ಗ್ರಾಮೀಣ ಭಾಗದ ಕೃಷಿಕರಿಗೆ ಆರ್ಥಿಕ ಸದೃಢತೆತನ್ನು ನೀಡುತ್ತಿತ್ತು. ಆದರೆ ಕೇಂದ್ರ ಸರಕಾರ ಕಾಂಗ್ರೆಸ್ ಸರಕಾರದ ಯೋಜನೆಯ ಹೆಸರು ಬದಲಾವಣೆ ಮಾಡುವುದಲ್ಲದೆ ಕಾರ್ಮಿಕರಿಗೆ ಮಾರಕವಗುವಂತೆ ತಿದ್ದುಪಡಿ ತರಲಾಗಿದೆ.ಇದರ ಖರ್ಚಿನ ಶೇ.40ನ್ನು ರಾಜ್ಯ ಸರಕಾರ ಭರಿಸಬೇಕೆಂಬ
ಸೂಚನೆ ರಾಜ್ಯಗಳಿಗೆ ದೊಡ್ಡ ಹೊರೆಯಾಗಲಿದೆ. ಅಲ್ಲದೇ ಈ ಹಿಂದೆ ಗ್ರಾಮಗಳಲ್ಲಿಯೇ ಪಟ್ಟಿಗಳನ್ನು ತಯಾರಿಸಿ ಕೆಲಸ ಮಾಡಲಾಗುತ್ತಿತ್ತು ಮುಂದೆ ಅದು ಸಾಧ್ಯವಾಗುವುದಿಲ್ಲ, ಕೃಷಿ ಚಟುವಟಿಕೆಗಳ ಸಂಧರ್ಭದಲ್ಲಿ ಕೆಲಸ ನಡೆಸಲು ಅವಕಾಶ ಇಲ್ಲ ಇತ್ಯಾದಿ ಸೂಚನೆಗಳು ಕಾರ್ಮಿಕರಿಗೆ ಮಾರಕವಾಗಿದೆ. ಇದರಿಂದ ಗ್ರಾಮೀಣ ಜನರಿಗೆ ಉದ್ಯೋಗ ನಷ್ಟ ಉಂಟಾಗುವ ಸಾಧ್ಯತೆ ಇದೆ ಇದರ ವಿರುದ್ಧ ಎಲ್ಲೆಡೆಯಿಂದ ಪ್ರತಿಭಟನೆಯ ಸ್ವರ ಏಳಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಮಂಜುನಾಥ್ ಕಂದಡ್ಕ,ಜ್ಞಾನಶೀಲನ್ ರಾಜು, ಲಲನ ಕೆ.ಆರ್, ಪ್ರಮೀಳಾ ಪೆಲ್ತಡ್ಕ, ನಾಗಮುತ್ತು ಮಂಜುನಾಥ್ ಮಡ್ತಿಲ ಉಪಸ್ಥಿತರಿದ್ದರು.












