ಸುಳ್ಯ: ಸುಳ್ಯದಲ್ಲಿ ಯಾವುದೇ ಗುಂಪುಗಳಿಲ್ಲ, ಭಿನ್ನಮತ ಇಲ್ಲ ಕೇವಲ ಭಿನ್ನ ಅಭಿಪ್ರಾಯ ಮಾತ್ರಗಳು ಇವೆ ಅಷ್ಟೇ.ಸುಳ್ಯದಲ್ಲಿ ಕಾಂಗ್ರೆಸ್ ಸಂಘಟನೆಯಲ್ಲಿ ವಿಫಲವಾದ ಪರಿಣಾಮ ನಿರಂತರವಾಗಿ 30 ವರ್ಷಗಳಿಂದ ಸೋಲನ್ನು ಕಂಡಿದ್ದೇವೆ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಎಲ್ಲರನ್ನು ಒಮ್ಮತದ ಮೂಲಕ ಕೊಂಡೊಯ್ಯಲು ಸಮರ್ಥರಾದವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಿದ್ದೇವೆ ಎಂದು ಕೆಪಿಸಿಸಿ ವೀಕ್ಷಕರಾದ ಎಂ ನಾರಾಯಣ ಸ್ವಾಮಿ ಹೇಳಿದ್ದಾರೆ.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆ ವಿವಾದ ಸಂಬಂಧಿಸಿ ಸುಳ್ಯದಲ್ಲಿ ಮುಖಂಡರಿಂದ ಮತ್ತು ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದ
ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಮೂರು ದಿನಗಳ ಒಳಗಾಗಿ ವೀಕ್ಷಕರ ತಂಡ ವರದಿ ತಯಾರಿಸಿ ರಾಜ್ಯಧ್ಯಕ್ಷರಿಗೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಚಾರವಾಗಿ ಉಂಟಾದ ವಿವಾದದ ಕುರಿತು ವೀಕ್ಷಕರ ತಂಡ ಮಾಹಿತಿ ಸಂಗ್ರಹಿಸಿದರು.
ಮಂಗಳವಾರ ಸುಳ್ಯದ ಖಾಸಗಿ ಹೋಟೇಲ್ ವೀಕ್ಷಕರಾದ ಎಂ ನಾರಾಯಣ ಸ್ವಾಮಿ , ಡಿಸಿಸಿ ಅದ್ಯಕ್ಷರ ಹರೀಶ್ ಕುಮಾರ್ , ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ , ಗೇರು ನಿಗಮ ಅಧ್ಯಕ್ಷೆ ಮಮತ ಗಟ್ಟಿ ನೇತೃತ್ವದ ವೀಕ್ಷಕರು ಆಗಮಿಸಿ ಸುಳ್ಯ ತಾಲೂಕಿನಿಂದ ರಾಜ್ಯ ,ಜಿಲ್ಲಾ , ತಾಲೂಕು ಹಾಗೂ ಗ್ರಾಮ ಮಟ್ಟದ ನಾಯಕರುಗಳ ಅಭಿಪ್ರಾಯವನ್ನು ಪಡೆದರು. ಬಳಿಕ ಕಾರ್ಯಕರ್ತರು ಮತ್ತು ನಿಯೋಜಿತ ಅಧ್ಯಕ್ಷ ರಾಧಕೃಷ್ಣ ಬೊಳ್ಳುರು, ಆಕಾಂಕ್ಷಿ ಸೋಮಶೇಖರ ಕೊಯಿಂಗಾಜೆ, ಸರಸ್ವತಿ ಕಾಮತ್, ಮುಖಂಡರಾದ ಧನಂಜಯ ಅಡ್ಪಂಗಾಯ, ಟಿ.ಎಂ.ಶಹೀದ್ ಸೇರಿದಂತೆ ನಾಯಕರು ಹಾಗೂ ಕಾರ್ಯಕರ್ತರು, ಪ್ರಮುಖರಿಂದ ಅಭಿಪ್ರಾಯಗಳನ್ನು ಶೇಖರಿಸಲಾಯಿತು.





