ಕಡಬ: ರೈಲು ಅಪಘಾತ ಗೊಳಗಾದ ನಾಗಣ್ಣ ಗೌಡ ಅವರ ಮನೆಗೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿತು. ಕೆಪಿಸಿಸಿ ಸಂಯೋಜಕ ಹಾಗೂ ಕಡಬ ಕಾಂಗ್ರೆಸ್ ಉಸ್ತುವಾರಿ ಎಚ್.ಎಂ.ನಂದಕುಮಾರ್ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್
ಸದಸ್ಯ ಪಿ. ಪಿ ವರ್ಗಿಸ್,ಸತೀಶ್ ಮೇಲಿನಮನೆ, ಸತೀಶ್ ಮೀನಾಡಿ, ಸತೀಶ್ ಕೆಡೆಂಜೆ, ಫಜಲ್ ಕೋಡಿಂಬಾಳ , ಸಿ. ಪಿ ಸೈಮನ್, ಕ್ಷೆವಿಯರ್ ಬೇಬಿ, ಇಸ್ಮಾಯಿಲ್ ಎಮ್.ಹೆಚ್. ಐತೂರ್, ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಶಂಕರ ಬಿಳಿನೆಲೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಹಾಗೂ ಮಹಿಳಾ ಬ್ಲಾಕ್ ಅಧ್ಯಕ್ಷರು ಶಾರದಾ, ಸತೀಶ್ ಶೆಟ್ಟಿ ಹೊಸಮಠ, ಜಗನ್ನಾಥ ಶೆಟ್ಟಿ ಹಾಗೂ ನಾಗೇಶ್ ಬೈಲು, ಸತೀಶ್ ಕಳಿಗೆ ಹಾಗೂ ಶಾಕಿರ್ ಮರ್ಧಾಳ, ಶರೀಫ್ ಕಡಬ ಇತರ ಮುಖಂಡರು ರೈಲು ಅಪಘಾತ ದಲ್ಲಿ ಗಾಯಗೊಂಡ ನಾಗಣ್ಣ ಗೌಡರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ನಂದಕುಮಾರ್ ಅವರು ವೈಯಕ್ತಿಕ ಸಹಾಯ ಧನ ನೀಡಿದರು. ಅಲ್ಲದೆ ಕಡಬ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಹೆಚ್ಚಿನ ಚಿಕಿತ್ಸೆ ಗೆ ಸಹಾಯ ಧನ ನೀಡುವುದಾಗಿ ಭರವಸೆ ನೀಡಲಾಯಿತು.