ತೊಡಿಕಾನ:ಕೆಪಿಸಿಸಿ ಸದಸ್ಯ, ಉದ್ಯಮಿ ಹೆಚ್ ಎಂ ನಂದಕುಮಾರ್ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅಡ್ಯಡ್ಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಬೇಡಿಕೆ ಅಹವಾಲುಗಳ ಬಗ್ಗೆ ಚರ್ಚಿಸಿದರು. ಸುಳ್ಯದ ಜನತೆ ನೀಡಿದ ಪ್ರೀತಿ, ಅಭಿಮಾನಕ್ಕೆ
ಋಣಿಯಾಗಿದ್ದೇನೆ. ತಮ್ಮ ಸಮಸ್ಯೆ ಅಹವಾಲುಗಳಿಗೆ ಬ್ಲಾಕ್ ಅಧ್ಯಕ್ಷರು ಮತ್ತು ಪಕ್ಷದ ನಾಯಕರೊಂದಿಗೆ ಸ್ಪಂದಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ‘ತಮಿಳು ಕಾರ್ಮಿಕರ ಮತ್ತು ಕಾರ್ಯಕರ್ತರ ಯಾವುದೇ ಸಮಸ್ಯೆಗೆ ನಾವು ಸದಾ ಸ್ಪಂದಿಸುತ್ತೇವೆ. ಪಕ್ಷ ಸಂಘಟನೆ ಮತ್ತು ಅಭಿವೃದ್ಧಿಗೆ ತಾವೆಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು.

ಬೆಂಗಳೂರು ನಗರ ಜಿಲ್ಲಾ ಇಂಟಕ್ ಅಧ್ಯಕ್ಷ ಮುರುಘನ್ ಮಾತನಾಡಿದರು. ಕಾಂಗ್ರೆಸ್ ಮುಖಂಡ ಅಣ್ಣಾದೊರೈ ಸ್ವಾಗತಿಸಿ ವಂದಿಸಿದರು. ಅಡ್ಯಡ್ಕ ಸಮೀಪದ ಕೋಣಗುಂಡಿಯ ದಂಪತಿಗಳಾದ ಸವಿತಾ ಮತ್ತು ದಾಮೋದರ ಅವರ ಮನೆಗೆ ಭೇಟಿ ನೀಡಿ ನಂದಕುಮಾರ್ ನಿರ್ಮಾಣ ಹಂತದಲ್ಲಿರುವ ಮನೆಯ ಕೆಲಸ ಪೂರೈಸಲು ಆರ್ಥಿಕ ನೆರವು ನೀಡಿದರು.

ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಗೋಕುಲ್ ದಾಸ್, ತೊಡಿಕಾನ ಗ್ರಾಮ ಕಾಂಗ್ರೆಸ್ ಅಧ್ಯಕ್ಷ ತಿಮ್ಮಯ್ಯ ತೋಡಿಕಾನ, ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ ತೋಡಿಕಾನ, ರಕ್ಷಿತ್ ದೊಡ್ಡಡ್ಕ, ಶುಭಕರ ನಾಯಕ್ ಉಬರಡ್ಕ, ಪ್ರೇಮ ಹರೀಶ್ವರನ್ ಗಾಂಧಿ, ಯಶವಂತ ಅಡ್ಯಡ್ಕ, ಭರತ್ ಅಡ್ಯಡ್ಕ, ಸುರೇಂದ್ರ ಅಡ್ಯಡ್ಕ, ಪುನೀತ್ ಅಡ್ಯಡ್ಕ, ಮಂಜುನಾಥ್ ಮಡ್ತಿಲ, ಮಣಿಕಂಠಣ್ ಮೊದಲಾದವರು ಉಪಸ್ಥಿತರಿದ್ದರು.









