ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಬ್ಲಾಕ್ ಮತ್ತು ಕಡಬ ಬ್ಲಾಕ್ನ ಕಾರ್ಯಕರ್ತರ ಉಚ್ಚಾಟನೆ ಆದೇಶ ವಾಪಾಸ್ ಮಾಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕೆಪಿಸಿಸಿ ಸದಸ್ಯ ಹೆಚ್.ಎಂ.ನಂದಕುಮಾರ್ ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ
ಕಾಂಗ್ರೆಸ್ ಅಭ್ಯರ್ಥಿಯ ಸೋಲಿನ ಬಳಿಕದ ಬೆಳವಣಿಗೆಯಲ್ಲಿ ಸುಳ್ಯ ಬ್ಲಾಕ್ ಹಾಗೂ ಕಡಬ ಬ್ಲಾಕ್ನ ಕೆಲವು ಪ್ರಮುಖರನ್ನು ಯಾವುದೇ ಸ್ಪಷ್ಟ ಕಾರಣ ನೀಡದೆ ಉಚ್ಚಾಟನೆ ಮಾಡಿ ಆದೇಶ ಮಾಡಲಾಗಿತ್ತು. ಇದನ್ನು ಹಿಂಪಡೆಯುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಸಲ್ಲಿಸಿದ್ದವು.ಈ ಮನವಿಯನ್ನು ಪರಿಗಣಿಸಿ ಎಲ್ಲಾ ಕಾರ್ಯಕರ್ತರ ಉಚ್ಚಾಟನೆ ಆದೇಶವನ್ನು ಡಿ.ಕೆ.ಶಿವಕುಮಾರ್ ಅವರು ಹಿಂಪಡೆದಿದ್ದಾರೆ. ಜಿಲ್ಲೆಯ ಕೆಲವು ಮುಖಂಡರ ವಿರೋಧದ ನಡುವೆಯೂ ಉಚ್ಚಾಟನೆಯನ್ನು ಹಿಂಪಡೆದಿರುವುದಕ್ಕೆ ಎಲ್ಲಾ ಕಾರ್ಯಕರ್ತರ ಪರವಾಗಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ನಂದಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ