ಸುಳ್ಯ:ಕೆಪಿಸಿಸಿ ಸದಸ್ಯ ಹೆಚ್. ಎಂ. ನಂದಕುಮಾರ್ ಅವರಿಗೆ ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಥಾನ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಸುಳ್ಯದ ನಂದಕುಮಾರ್ ಅಭಿಮಾನಿಗಳ ಬಳಗ ಮಾ.26ರಂದು ತುರ್ತು ಸಭೆ ಕರೆಯಲಾಗಿದೆ. ಅಭಿಮಾನಿ ಬಳಗದ ಕೆಲವು ಪ್ರಮುಖರು ಇಂದು ಸಭೆ ಸೇರಿ ಕಾಂಗ್ರೆಸ್
ಕಾರ್ಯಕರ್ತರ ಸಭೆ ಕರೆಯಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ಸೀಟ್ ಕೈ ತಪ್ಪಿರುವ ಹಿನ್ನಲೆಯಲ್ಲಿ ಮುಂದಿನ ನಡೆಯ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ಕಾರ್ಯಕರ್ತರ ಮತ್ತು ನಂದಕುಮಾರ್ ಅಭಿಮಾನಿಗಳ ತುರ್ತು ಸಭೆಯನ್ನು ಮಾ.26 ರಂದು ಆದಿತ್ಯವಾರ ಪೂ. ಗಂಟೆ 10:30 ಕ್ಕೆಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ಕರೆಯಲಾಗಿದೆ. ಸುಳ್ಯ ಬ್ಲಾಕ್ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಂದಕುಮಾರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ನಂದಕುಮಾರ್ ಅಭಿಮಾನಿ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.