ಸುಳ್ಯ:ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯನ್ನು ಮರು ಪರಿಶೀಲನೆ ಮಾಡಬೇಕು ಮಾಡಬೇಕು ಎಂದು ನಂದಕುಮಾರ್ ಅಭಿಮಾನಿಗಳಾದ ಕಾಂಗ್ರೆಸ್ ಕಾರ್ಯಕರ್ತರು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಅವರಿಗೆ ಮನವಿ ಸಲ್ಲಿಸಲಾಯಿತು. ಬಳಿಕ
ಅಭ್ಯರ್ಥಿ ಆಯ್ಕೆ ಮರು ಪರಿಶೀಲನೆ ಮಾಡಬೇಕು ಮತ್ತು
ಹೆಚ್.ಎಂ.ನಂದಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಜಿಲ್ಲಾ ಸಮಿತಿಯನ್ನು ಆಗ್ರಹಿಸಲು ನಂದಕುಮಾರ್ ಅಭಿಮಾನಿಗಳಾದ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿಗೆ ತೆರಳಿದ್ದಾರೆ. ಸುಳ್ಯ ಮತ್ತು ಕಡಬದಿಂದ ಕಾರ್ಯಕರ್ತರು ತೆರಳಿದ್ದು ಇಂದು ಮಧ್ಯಾಹ್ನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಮಾವೇಶಗೊಳ್ಳಲಿದ್ದಾರೆ ಎಂದು ನಂದಕುಮಾರ್ ಅಭಿಮಾನಿ ಬಳಗದ ಪ್ರಮುಖರು ತಿಳಿಸಿದ್ದಾರೆ. ಸುಳ್ಯ ಹಾಗು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಮಂಗಳೂರಿಗೆ ತೆರಳಿದ್ದಾರೆ. ಬ್ಲಾಕ್ ಹಾಗು ಜಿಲ್ಲಾ ನಾಯಕರಿಗೆ ಮನವಿ ಸಲ್ಲಿಸಿದ ಬಳಿಕ ಇದೇ ಬೇಡಿಕೆ ಮುಂದಿರಿಸಿ ರಾಜ್ಯ ಹಾಗು ರಾಷ್ಟ್ರ ನಾಯಕರನ್ನು ಭೇಟಿ ಮಾಡಲಾಗುವುದು ಎಂದು
ಮುಖಂಡರು ತಿಳಿಸಿದ್ದಾರೆ.