ಸುಳ್ಯ: ಅಮರ ಸುಳ್ಯ ರಮಣೀಯವಾಗಬೇಕು ಎಂಬ ಕಲ್ಪನೆಯೊಂದಿಗೆ ವಾರದಲ್ಲಿ ಒಂದು ಗಂಟೆ. ಕಳೆದ ಒಂಭತ್ತು ವಾರಗಳಿಂದ ಈ ರೀತಿಯ ಒಂದು ಒಂದು ಸ್ವಚ್ಛತಾ ಅಭಿಯಾನ ಸದ್ದಿಲ್ಲದೆ ನಡೆಯುತಿದೆ.ಸುಳ್ಯ ಸ್ವಚ್ಛವಾಗಬೇಕು ಮತ್ತು ರಮಣೀಯವಾಗಿ ಕಂಗೊಳಿಸಬೇಕು ಎಂದು ಪ್ರತಿ ವಾರ ಒಂದು ಗಂಟೆಯ ಸುಳ್ಯ ನಗರದ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ. ಗುರುವಾರ ಬೆಳಿಗ್ಗೆ 7 ಗಂಟೆಯಿಂದ 8 ಗಂಟೆಯ ತನಕ

ಸ್ವಚ್ಛತಾ ಕಾರ್ಯ ನಡೆಸಲಾಗುತಿದೆ. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ನೇತೃತ್ವದಲ್ಲಿ ನಗರ ಪಂಚಾಯತ್ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಹಾಗು ವರ್ತಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪ್ರಮುಖರು ಸ್ವಚ್ಛತಾ ಕಾರ್ಯ ನಡೆಸಲಾಗುತಿದೆ. ನಗರದ ನಿರ್ದಿಷ್ಟ ಪ್ರದೇಶದಲ್ಲಿ ಸ್ವಚ್ಛತೆ ನಡೆಸಲಾಗುತ್ತದೆ. ಸ್ವಚ್ಛತೆಯ ಮಾಹಿತಿ ವಿನಿಮಯಕ್ಕಾಗಿ ‘ಅಮರ ಸುಳ್ಯ ರಮಣೀಯ ಸುಳ್ಯ’ ಎಂಬ ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ. ನಗರ ಪಂಚಾಯತ್ ವತಿಯಿಂದ ಪ್ರತಿ ದಿನ ನಗರ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ. ಇದರ ಜೊತೆಗೆ ಸ್ವಚ್ಛತಾ ಕಾರ್ಯದಲ್ಲಿ

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಲು ಈ ರೀತಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುತಿದೆ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂಸಡ್ಕ ಹೇಳುತ್ತಾರೆ. ನ.10 ರಂದು 9ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಶ್ರೀರಾಮ ಪೇಟೆಯಿಂದ ಜ್ಯೋತಿ ವೃತ್ತದವರೆಗೆ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ನಡೆಯಿತು.
ಈ ದಿನದ ಸ್ವಚ್ಛತಾ ಕಾರ್ಯದಲ್ಲಿ ಪದ್ಮಶ್ರೀ ಪುರಸ್ಕೃತರಾದ
ಡಾ.ಗಿರೀಶ್ ಭಾರದ್ವಜ್, ನ ಪಂ ಅಧ್ಯಕ್ಷ ವಿನಯ ಕುಮಾರ್, ಸದಸ್ಯರಾದ ಬುದ್ಧ ನಾಯ್ಕ್, ಕಿಶೋರಿ ಶೇಟ್, ಸುಧಾಕರ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಡಾ ಶ್ರೀಕೃಷ್ಣ ಎಂ ಎನ್, ಜನಾರ್ಧನ ದೋಳ, ಕಸ್ತೂರಿ ಶಂಕರ್, ಪ್ರಭಾಕರನ್ ನಾಯರ್, ಲತಾ ಪ್ರಸಾದ್ ಕುದ್ಪಾಜೆ, ದಾಮೋದರ ಮಂಚಿ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ಆರೋಗ್ಯ ಇಲಾಖೆಯ ಪ್ರಮೀಳಾ, ಕುಂಕುಮ್ ಫ್ಯಾಷನ್‌ನ ಭೀಮ್ ಪಟೇಲ್ ಮತ್ತು ತಂಡ, ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

