ಸುಳ್ಯ: ಸುಳ್ಯ ನಗರ ಪರಿಸರಕ್ಕೆ ಮೇಯಲು ಬಂದ ಆಡುಗಳನ್ನು ಸುಳ್ಯ ನಗರ ಪಂಚಾಯತ್ ನವರು ಹಿಡಿದು ಕಟ್ಟಿ ಹಾಕಿದ ಘಟನೆ ನಡೆದಿದೆ.ಮೂರು ಆಡುಗಳು ಮೇಯಲು ನಗರ ಪಂಚಾಯತ್ ಅವರಣಕ್ಕೆ ಬಂದಿದ್ದು ನಗರ ಪಂಚಾಯತ್ ಅವರಣದಲ್ಲಿದ ಗಿಡಗಳನ್ನು
ತಿಂದವು. ಇದನ್ನು ಕಂಡ ನಗರ ಪಂಚಾಯತ್ ಸಿಬ್ಬಂದಿಗಳು ಆಡುಗಳನ್ನು ಹಿಡಿದು ಕಟ್ಟಿ ಹಾಕಿದ್ದಾರೆ. ನಗರ ಪಂಚಾಯತ್ಗೆ ಸೂಕ್ತ ದಂಡ ಕಟ್ಟಿ ಬಿಡಿಸಿಕೊಂಡು ಹೋಗುವಂತೆ ಮಾಲೀಕರಿಗೆ ಸೂಚಿಸಲಾಗಿದೆ.
ಸಾರ್ವಜನಿಕ ರಸ್ತೆಯಲ್ಲಿ ಸಾಕುಪ್ರಾಣಿಗಳನ್ನು ಬಿಡಬಾರದು ಎಂದು ಅನೇಕ ಬಾರಿ ನಗರ ಪಂಚಾಯತ್ ಪ್ರಕಟಿಸಿದರೂ ಜನರು ರಸ್ತೆಗೆ ಸಾಕು ಪ್ರಾಣಿಗಳನ್ನು ಬಿಡುತ್ತಿದ್ದಾರೆ. ಸುಳ್ಯ ನಗರ ಪಂಚಾಯತ್ ಆವರಣದಲ್ಲಿ ಗಿಡಗಳನ್ನು ತಿಂದ ಆಡುಗಳನ್ನು ಕಟ್ಟಿ ಹಾಕಿದ ಕುರಿತು ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಮಾಹಿತಿ ನೀಡಿದ್ದಾರೆ. ಆಡಿನ ವಾರಿಸುದಾರರು ಸೂಕ್ತ ದಂಡ ಪಾವತಿಸಿ ಆಡುಗಳನ್ನು ಕೊಂಡೊಯ್ಯಬಹುದು ಎಂದು ಅವರು ಹೇಳಿದರು.