ಸುಳ್ಯ:ಸುಳ್ಯದ ಕಸದ ಸಮಸ್ಯೆ ಮಿತಿ ಮೀರಿದ್ದು 30 ವರ್ಷಗಳ ಕಾಲ ಸುಳ್ಯ ನಗರ ಪಂಚಾಯತ್ ಆಡಳಿತ ನಡೆಸಿದ ಬಿಜೆಪಿ ನಗರದ ಕಸದ ಸಮಸ್ಯೆ ಪರಿಹರಿಸಲು ಇಚ್ಛಾಶಕ್ತಿ ತೋರಿಲ್ಲ. ಇದೀಗ ಸುಳ್ಯದ ಪುರಭವನದಲ್ಲಿಯೇ ಕಸದ ರಾಶಿ ಸುರಿದಿರುವುದು ಆಘಾತ ತಂದಿದೆ ಎಂದು ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ ಹೇಳಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಕೆವಿಜಿ ಪುರಭವನ ಕಟ್ಟಡದ ಆವರಣದಲ್ಲಿ
ಕಸದರಾಶಿ ಹಾಕಿರುವುದು ಖಂಡನೀಯವಾಗಿದೆ.ಕಳೆದ 30 ವರ್ಷಗಳಿಂದ ಸುಳ್ಯದಲ್ಲಿ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ನಗರ ಪಂಚಾಯತ್ ಆಡಳಿತ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಜ.22 ರಂದು ನಗರ ಪಂಚಾಯತ್ ಮುಂಭಾಗದಲ್ಲಿ ಸುಳ್ಯ ನಗರ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.ಕಲ್ಚರ್ಪೆಯಲ್ಲಿ ನಿರ್ಮಿಸಿರುವ ಕಸ ಬರ್ನಿಂಗ್ ಮೆಷಿನ್ನ ಕಥೆ ಏನಾಯಿತು ಎಂದು ಪ್ರಶ್ನಿಸಿದ ಅವರು ತ್ಯಾಜ್ಯ ಘಟಕವನ್ನು ಕೇಂದ್ರವನ್ನು ಸರಿಯಾಗಿ ನಿರ್ವಹಿಸಲು ನಗರ ಪಂಚಾಯತ್ ಆಡಳಿತ ನಡೆಸಿದವರಿಂದ ಈವರೆಗೆ ಸಾಧ್ಯವಾಗಿಲ್ಲ. ಅಲ್ಲದೆ ಅಲ್ಲಿಯ ಅವ್ಯವಸ್ಥೆಯಿಂದ ಸ್ಥಳೀಯ ನಿವಾಸಿಗಳಿಗೆ ಸದಾ ಸಮಸ್ಯೆಗಳು ಕಾಡುತ್ತಿದೆ. ಕಸ ವಿಲೇವಾರಿ ಘಟಕಕ್ಕೆ ನಿರ್ದಿಷ್ಟ ಜಾಗವನ್ನು ಗುರುತಿಸಿಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ.

ಈ ಬಗ್ಗೆ ಸುಳ್ಯ ಕಾಂಗ್ರೆಸ್ ಹಲವಾರು ಬಾರಿ ಪ್ರತಿಭಟನೆ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯವನ್ನು ಮಾಡಿದರೂ ಇದುವರೆಗೆ ಯಾವುದೇ ಸ್ಪಂದನೆ ದೊರಕಿಲ್ಲ.
ಎಂದರು. ಅಲ್ಲದೆ ನಗರದ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯೂ ಕೂಡ ಊರಿನ ಜನರಿಗೆ ಒಂದಲ್ಲ ಒಂದು ಸಮಸ್ಯೆಯನ್ನು ನೀಡುತ್ತಿದೆ. ನಗರದ ಬಹುತೇಕ ರಸ್ತೆಯ ಆಸು ಪಾಸುಗಳಲ್ಲಿ ಇಂಟರ್ಲಾಕ್, ಡಾಮರ್ ಗೊಂಡ ರಸ್ತೆ, ಕಾಂಕ್ರೀಟ್ ಕೊಂಡ ರಸ್ತೆ ಇವೆಲ್ಲವನ್ನು ಹಾಳು ಮಾಡಿದ್ದಾರೆ. ಇದರ ಬಗ್ಗೆಯೂ ಕೂಡ ಯಾವುದೇ ಗಮನ ಹರಿಸುತ್ತಿಲ್ಲ.ಅಮೃತ 2.0 ಯೋಜನೆಯಲ್ಲಿ ದುಗಲಡ್ಕದ ಎರಡು ವಾರ್ಡುಗಳನ್ನು ಬಿಟ್ಟು ಯೋಜನೆಯನ್ನು ರೂಪಿಸಿದ್ದಾರೆ. ಹಾಗಿದ್ದರೆ ಆ ಭಾಗದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಯಾರು ಎಂದು ಪ್ರಶ್ನಿಸಿದ್ದಾರೆ.
ನಗರ ಪಂಚಾಯತ್ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸೂಕ್ತ ತ್ಯಾಜ್ಯ ಘಟಕಕ್ಕಡ ಸೂಕ್ತ ಜಾಗ ಹುಡುಕಿ ತ್ಯಾಜ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೂಡಾಲ ಅಧ್ಯಕ್ಷ ಕೆ.ಎಂ.ಮುಸ್ತಫ, ನಗರ ಪಂಚಾಯತ್ ಮಾಜಿ ಸದಸ್ಯರಾದ ಕೆ ಗೋಕುಲ್ ದಾಸ್, ಶರೀಫ್ ಕಂಠಿ, ಧೀರಾ ಕ್ರಾಸ್ತಾ, ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಸಮಿತಿಯ ಸದಸ್ಯ ಭವಾನಿ ಶಂಕರ್ ಕಲ್ಮಡ್ಕ, ಭಾಸ್ಕರ ಪೂಜಾರಿ ಉಪಸ್ಥಿತರಿದ್ದರು.












