ಸುಳ್ಯ:ಬಡ ಮತ್ತು ನಿರ್ಗತಿಕ ಮಕ್ಕಳ ಸಮನ್ವಯ ವಿದ್ಯಾಭ್ಯಾಸ ಕೇಂದ್ರ ಸುಳ್ಯದ ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ನ ವತಿಯಿಂದ ರಾಜ್ಯಮಟ್ಟದ ಮುಹ್ಯುದ್ದೀನ್ ಮಾಲೆ ಆಲಾಪನೆ ಸ್ಪರ್ಧೆ ಹಾಗೂ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ‘ಆರ್ಟ್ಸ್ ಅಲೈವ್’ ಗೆ ಚಾಲನೆ ನೀಡಲಾಗಿದೆ. ನ.3ರಂದು ನಡೆಯುವ ರಾಜ್ಯಮಟ್ಟದ ಮುಹ್ಯುದ್ದೀನ್ ಮಾಲೆ ಆಲಾಪನೆ ಸ್ಪರ್ಧೆ ಹಾಗೂ ನ.4 ಮತ್ತು 5 ರಂದು ನಡೆಯುವ ದಅವಾ, ಹಿಫ್ಳ್, ಮದರಸ ವಿದ್ಯಾರ್ಥಿಗಳ ಕಲಾ ಸಾಂಸ್ಕೃತಿಕ ಕಾರ್ಯಕ್ರಮ
ಅನ್ಸಾರಿಯಾ ಕ್ಯಾಂಪಸ್ನಲ್ಲಿ ನಡೆಯುತಿದೆ.ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ನ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ ಧ್ವಜಾರೋಹಣ ನೆರವೇರಿಸಿದರು. ಬಳಿಕ ನಡೆದ ಸಮಾರಂಭದಲ್ಲಿ
ಹಿರಿಯ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡ ಡಾ.ಅಬ್ದುಲ್ ರಶೀದ್ ಝೈನಿ ಖಾಮಿಲ್ ಸಖಾಫಿ ಉದ್ಘಾಟನೆ ನೆರವೇರಿಸಿದರು. ಸಯ್ಯದ್ ಕುಂಞಿಕೋಯ ತಂಙಳ್ ಸಹದಿ ದುಃವಾ ನೆರವೇರಿಸಿದರು.
ಗಾಂಧಿನಗರ ಜುಮಾ ಮಸೀದಿಯ ಅಧ್ಯಕ್ಷ ಕೆ.ಎಂ.ಮುಸ್ತಫ, ಅನ್ಸಾರುಲ್

ಮುಸ್ಲೀಮಿನ್ ಎಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಶುಕೂರ್, ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ನ ಖತೀಬರಾದ ಉಮ್ಮರ್ ಮುಸ್ಲಿಯಾರ್, ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ನ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಕೋಶಾಧಿಕಾರಿ ಆದಂ ಹಾಜಿ ಕಮ್ಮಾಡಿ, ಪ್ರಮುಖರಾದ ಮುಹ್ಯುದ್ದೀನ್ ಫ್ಯಾನ್ಸಿ, ಎಸ್.ಎಂ.ಅಬ್ದುಲ್ ಹಮೀದ್, ಶಾಫಿ ಕುತ್ತಮೊಟ್ಟೆ, ಅಬ್ದುಲ್ ಹಮೀದ್ ಬೀಜಕೊಚ್ಚಿ, ಅಬ್ದುಲ್ ಖಾದರ್ ಪಟೇಲ್, ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ನ ನಿರ್ದೇಶಕ ಕೆ.ಬಿ.ಇಬ್ರಾಹಿಂ, ಅಬ್ದುಲ್ ಹಮೀದ್ ಜನತಾ, ಮುಸ್ತಫ ಬೀಜಕೊಚ್ಚಿ, ಎಸ್.ಪಿ.ಅಬೂಬಕ್ಕರ್, ಉಮ್ಮರ್ ಕೋಲ್ಚಾರ್, ಅಬೂಬಕ್ಕರ್, ಗ್ರೀನ್ ವ್ಯೂ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಂ.ಅಬ್ದುಲ್ ರಹಿಮಾನ್, ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ನ

ಮುದರಿಸ್ಸೀಸ್ ಅಬೂಬಕ್ಕರ್ ಸಖಾಫಿ, ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ನ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ನ ಅಧ್ಯಾಪಕರಾದ ಅಬ್ದುಲ್ಲ ಹಿಮಮಿ ಸಖಾಫಿ ಸ್ವಾಗತಿಸಿದರು. ವ್ಯವಸ್ಥಾಪಕರಾದ ಮಹಮ್ಮದ್ ಉವೈಸ್ ವಂದಿಸಿದರು. ಸಮಾರಂಭದಲ್ಲಿ ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ನ ಲೋಗೋ ಅನಾವರಣಗೊಳಿಸಲಾಯಿತು. 2024ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಬಳಿಕ ಮುಹ್ಯುದ್ದೀನ್ ಮಾಲೆ ಆಲಾಪನೆ ಸ್ಪರ್ಧೆ ಆರಂಭಗೊಂಡಿತು.










