ಸುಳ್ಯ:ಪೈಚಾರು ಶಾಂತಿನಗರಶ್ರೀ ಮುತ್ತಪ್ಪ-ತಿರುವಪ್ಪ ದೈವಸ್ಥಾನ (ಮಡಪುರ)ದಲ್ಲಿಶ್ರೀ ಮುತ್ತಪ್ಪ-ತಿರುವಪ್ಪ ದೈವಗಳ ಕಾಲಾವಧಿ ನೇಮೋತ್ಸವ ನಡೆಯುತಿದೆ.ಮಾ.14ರಂದು ಶನಿವಾರ ಬೆಳಿಗ್ಗೆ ಗಣಪತಿ ಹವನವಾಗಿ ಬೆಳಿಗ್ಗೆ 9 ರಿಂದ ಸಂಜೆ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.ಸಂಜೆ ಪೈಂಗುತ್ತಿ ಹಾಗೂ

ಶ್ರೀ ಮುತ್ತಪ್ಪ ದೈವದ ಮಲೆಯಿರಕ್ಕಲ್ (ಶ್ರೀ ದೈವವನ್ನು ಮಲೆ ಇಳಿಸುವುದು)ನಡೆಯಿತು.ಬಳಿಕ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ರಾತ್ರಿ ಶ್ರೀ ಮುತ್ತಪ್ಪ ದೈವದ ನೇಮ (ವೆಳ್ಳಾಟಂ)
ನಡೆಯಿತು.ರಾತ್ರಿ ಅನ್ನಸಂತರ್ಪಣೆಯಾಗಿ ಬಳಿಕ ರಿಂದ ಕಳಕಪಾಟ್, ಕಳಸ ಶೃಂಗಾರ ರುಮಾಲು ಕಟ್ಟುವುದು ನಡೆಯಿತು.
ಮಾ.15 ಭಾನುವಾರಬೆಳಿಗ್ಗೆ 6-30ಕ್ಕೆ ಶ್ರೀ ಮುತ್ತಪ್ಪ-ತಿರುವಪ್ಪ ದೈವಗಳ ನೇಮ, ಮಧ್ಯಾಹ್ನ 12-30 ರಿಂದ ಮಲೆ ಕೇಟಲ್ (ಮಲೆ ಹತ್ತಿಸುವುದು)
ಮಧ್ಯಾಹ್ನ ಗಂಟೆ 1ರಿಂದ ಅನ್ನಸಂತರ್ಪಣೆ ನಡೆಯಲಿದೆ.












