ಸುಳ್ಯ:ಪೈಚಾರು ಶಾಂತಿನಗರ ಶ್ರೀ ಮುತ್ತಪ್ಪ-ತಿರುವಪ್ಪ ದೈವಸ್ಥಾನ(ಮಡಪುರ)ದಲ್ಲಿ ಶ್ರೀ ಮುತ್ತಪ್ಪ-ತಿರುವಪ್ಪ ದೈವಗಳ ಕಾಲಾವಧಿ ನೇಮೋತ್ಸವ ಮಾ.15ರಂದು ನಡೆಯಿತು.ಬೆಳಿಗ್ಗೆ 6-30ಕ್ಕೆ ಶ್ರೀ ಮುತ್ತಪ್ಪ-ತಿರುವಪ್ಪ ದೈವಗಳ ನೇಮ ನಡೆದು ಪ್ರಸಾದ ವಿತರಣೆ ನಡೆಯಿತು. ನೂರಾರು ಮಂದಿ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ
ಮಲೆ ಕೇಟಲ್ (ಮಲೆ ಹತ್ತಿಸುವುದು) ನಡೆಯಲಿದೆ.ಮಧ್ಯಾಹ್ನ ಗಂಟೆ 1ರಿಂದ ಅನ್ನಸಂತರ್ಪಣೆ ನಡೆಯಲಿದೆ.ಮಾ.14ರಂದು ಶನಿವಾರ ಬೆಳಿಗ್ಗೆ ಗಣಪತಿ ಹವನವಾಗಿ ಬೆಳಿಗ್ಗೆ ನಿಂದ ಸಂಜೆ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ಪೈಂಗುತ್ತಿ ಹಾಗೂ ಶ್ರೀ ಮುತ್ತಪ್ಪ ದೈವದ ಮಲೆಯಿರಕ್ಕಲ್ (ಶ್ರೀ ದೈವವನ್ನು ಮಲೆ ಇಳಿಸುವುದು) ನಡೆದು

ಶ್ರೀ ಮುತ್ತಪ್ಪ ದೈವದ ವೆಳ್ಳಾಟಂ ನಡೆಯಿತು. ರಾತ್ರಿ ಕಳಕಪಾಟ್, ಕಳಸ ಶೃಂಗಾರ ರುಮಾಲು ಕಟ್ಟುವುದು ನಡೆಯಿತು.ಎರಡು ದಿನಗಳ ನೇಮೋತ್ಸವದಲ್ಲಿ ಊರ ಹಾಗೂ ಪರವೂರ ಸಾವಿರಾರು ಭಕ್ತರು ಭಾಗವಹಿಸಿದ್ದಾರೆ. ಶ್ರೀ ಮುತ್ತಪ್ಪ ಸೈವಾರಾಧನಾ ಸೇವಾ ಸಮಿತಿ ಅಧ್ಯಕ್ಷ ಪಿ.ಎಂ.ಮಧುಸೂದನ, ಮೊಕ್ತೇಸರರಾದ ರಾಮಕೃಷ್ಣ ಎಸ್.ಎನ್ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.













