ಸುಳ್ಯ:ಪೈಚಾರು ಶಾಂತಿನಗರ ಶ್ರೀ ಮುತ್ತಪ್ಪ-ತಿರುವಪ್ಪ ದೈವಸ್ಥಾನ (ಮಡಪುರ)ದಲ್ಲಿ ಶ್ರೀ ಮುತ್ತಪ್ಪ-ತಿರುವಪ್ಪ ದೈವಗಳ ಕಾಲಾವಧಿ ನೇಮೋತ್ಸವ ಇಂದು ಮತ್ತು ನಾಳೆ(ಮಾ.14 ಮತ್ತು 15) ನಡೆಯಲಿದೆ. ಮಾ.14ರಂದು ಶನಿವಾರ ಬೆಳಿಗ್ಗೆ ಗಣಪತಿ ಹವನವಾಗಿ ಬೆಳಿಗ್ಗೆ 9 ರಿಂದ ಸಂಜೆ ಗಂಟೆ 3-45ರ ವರೆಗೆ ವಿವಿಧ
ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಸಂಜೆ ಗಂಟೆ 4ಕ್ಕೆ ಪೈಂಗುತ್ತಿ ಹಾಗೂ ಶ್ರೀ ಮುತ್ತಪ್ಪ ದೈವದ ಮಲೆಯಿರಕ್ಕಲ್ (ಶ್ರೀ ದೈವವನ್ನು ಮಲೆ ಇಳಿಸುವುದು).
ಸಂಜೆ 5 ಕ್ಕೆ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 7ಕ್ಕೆ ಶ್ರೀ ಮುತ್ತಪ್ಪ ದೈವದ ನೇಮ (ವೆಳ್ಳಾಟಂ) ರಾತ್ರಿ9ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ10-30 ರಿಂದ ಕಳಕಪಾಟ್, ಕಳಸ ಶೃಂಗಾರ ರುಮಾಲು ಕಟ್ಟುವುದು.ಮಾ.15 ಭಾನುವಾರ ಬೆಳಿಗ್ಗೆ 6-30ಕ್ಕೆ ಶ್ರೀ ಮುತ್ತಪ್ಪ-ತಿರುವಪ್ಪ ದೈವಗಳ ನೇಮ, ಮಧ್ಯಾಹ್ನ 12-30 ರಿಂದ ಮಲೆ ಕೇಟಲ್ (ಮಲೆ ಹತ್ತಿಸುವುದು) ಮಧ್ಯಾಹ್ನ ಗಂಟೆ 1ರಿಂದ ಅನ್ನಸಂತರ್ಪಣೆ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ನೇಮೋತ್ಸವದಲ್ಲಿ ಊರ ಹಾಗೂ ಪರವೂರ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ ಎಂದು ಶ್ರೀ ಮುತ್ತಪ್ಪ ಸೈವಾರಾಧನಾ ಸೇವಾ ಸಮಿತಿ ಅಧ್ಯಕ್ಷ ಪಿ.ಎಂ.ಮಧುಸೂದನ, ಮೊಕ್ತೇಸರರಾದ ರಾಮಕೃಷ್ಣ ಎಸ್.ಎನ್ ಹಾಗೂ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.









