ಸುಳ್ಯ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮೀಫ್ ಉಪಾಧ್ಯಕ್ಷ, ಮಾಜಿ ನಗರ ಪಂಚಾಯತ್ ಸದಸ್ಯ ಕೆ. ಎಂ. ಮುಸ್ತಫ ಇವರನ್ನು ನೇಮಿಸಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ
ಇಮ್ರಾನ್ ಪ್ರತಾಪ್ ಘರಿ ಯವರ ಅನುಮೋದನೆ ಯೊಂದಿಗೆ ಎಐಸಿಸಿ ಮೈನಾರಿಟಿ ವಿಭಾಗ ಸಂಯೋಜಕರು, ಕರ್ನಾಟಕ ಉಸ್ತುವಾರಿ ಪದಾಧಿಕಾರಿ ಜೀನಾ. ಎಸ್. ಗಾಲಾವರು ನೇಮಿಸಿರುತ್ತಾರೆ
ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರಾಗಿ, ಸುಳ್ಯ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಯ ಉಪ ಸಭಾ ಪತಿಯಾಗಿ ಕಾರ್ಯನಿರ್ವಹಿಸುತ್ತಿರುವ ಮುಸ್ತಫ ಸುಳ್ಯ ನಗರ ಪಂಚಾಯತ್ ಸದಸ್ಯರಾಗಿ
25 ವರ್ಷ ಸೇವೆ ಸಲ್ಲಿಸಿ, ಜಿಲ್ಲಾ ಯೋಜನಾ ಸಮಿತಿ, ವಕ್ಫ್ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.







