ನವದೆಹಲಿ: ಮುಂಗಾರು ಮಾರುತವು ಮುಂದಿನ ಮೂರು–ನಾಲ್ಕು ದಿನಗಳಲ್ಲಿ ಚುರುಕುಗೊಳ್ಳಲಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಮುಂಗಾರು ಚುರುಕುಗೊಳ್ಳುವ ಸಾಧ್ಯತೆಯಿದೆ. ವಾಡಿಕೆಯಂತೆ ಮುಂಗಾರು ಮಾರುತವು ಕೇರಳ ರಾಜ್ಯವನ್ನು ಜೂನ್ 1ರಂದು ಪ್ರವೇಶಿಸಿ, ಜೂನ್ ಮೊದಲಾರ್ಧದ ವೇಳೆಗೆ ದಕ್ಷಿಣದ ಅರ್ಧಭಾಗವನ್ನು
ಆವರಿಸಿಕೊಳ್ಳುತ್ತಿತ್ತು. ಈ ಬಾರಿ ಜೂನ್ 8 ರಂದು ಕೇರಳ ಪ್ರವೇಶಿಸಿದರೂ ಬಿಪೊರ್ಜಾಯ್ ಚಂಡಮಾರುತದಿಂದಾಗಿ ಮುಂಗಾರು ದುರ್ಬಲವಾಗಿ ಮುಂದುವರಿದಿತ್ತು.
‘ಪರಿಸ್ಥಿತಿ ಈಗ ಅನುಕೂಲಕರವಾಗಿದೆ. ಮುಂಗಾರು ಮಾರುತ ಪ್ರಬಲವಾಗುತ್ತಿದೆ. ಕ್ರಮೇಣ ಕೇಂದ್ರ ಭಾಗದ ರಾಜ್ಯಗಳು ಪಶ್ಚಿಮದ ರಾಜ್ಯಗಳನ್ನು ಆವರಿಸಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೇಶದಾದ್ಯಂತ ಈವರೆಗೆ ವಾಡಿಕೆಗಿಂತಲೂ ಶೇ 33ರಷ್ಟು ಕಡಿಮೆ ಮಳೆಯಾಗಿದೆ. ಕೆಲವು ರಾಜ್ಯಗಳಲ್ಲಿ ಮಳೆಯ ಪ್ರಮಾಣ ಶೇ 95ರಷ್ಟು ಕೊರತೆಯಾಗಿದೆ. ಈ ವಾರ ಮುಂಗಾರು ಮಳೆಯು ಆಶಾದಾಯಕವಾಗಿರಲಿದೆ ಸಾಧಾರಣದಿಂದ ಉತ್ತಮ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಅಧಿಕಾರಿಗಳು ಹೇಳಿದ್ದಾರೆ.