ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸತತ ಐದನೇ ಗೆಲುವು.ನಾಯಕಿ ಹರ್ಮನ್ಪ್ರೀತ್ ಕೌರ್ (51) ಅವರ ಆಕರ್ಷಕ ಅರ್ಧಶತಕ ಹಾಗೂ ಬೌಲರ್ಗಳ ಶಿಸ್ತಿನ ದಾಳಿಯ ನೆರವಿನಿಂದ ಮುಂಬೈ ತಂಡ 55 ರನ್ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
ಮೊದಲು ಬ್ಯಾಟ್ ಮಾಡಿದ ಹರ್ಮನ್ ಬಳಗ 20 ಓವರ್ಗಳಲ್ಲಿ
8 ವಿಕೆಟ್ಗಳಿಗೆ 162 ರನ್ ಗಳಿಸಿದರೆ, ಜೈಂಟ್ಸ್ ತಂಡ ನಿಗದಿತ ಓವರ್ಗಳಲ್ಲಿ 9 ವಿಕೆಟ್ಗಳಿಗೆ 107 ರನ್ ಮಾತ್ರ ಗಳಿಸಿತು. ನಥಾಲಿ ಸಿವೆರ್ ಬ್ರಂಟ್ (21ಕ್ಕೆ 3) ಮತ್ತು ಹೆಯಲಿ ಮ್ಯಾಥ್ಯೂಸ್ (23ಕ್ಕೆ 3) ಅವರ ಚುರುಕಿನ ದಾಳಿಗೆ ಜೈಂಟ್ಸ್ ಬ್ಯಾಟರ್ಗಳು ದಂಗಾದರು.ಆಡಿದ ಎಲ್ಲ ಐದು ಪಂದ್ಯಗಳನ್ನು ಗೆದ್ದುಕೊಂಡ ಮುಂಬೈ ತಂಡ 10 ಪಾಯಿಂಟ್ಸ್ಗಳೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿತು.
ಮುಂಬೈ ತಂಡ ಯಷ್ಟಿಕಾ ಭಾಟಿಯಾ 44, ನಥಾಲಿ ಸಿವೆರ್ ಬ್ರಂಟ್ 36 ಉತ್ತಮ ಕೊಡುಗೆ ನೀಡಿದರು.ಹರ್ಮನ್ಪ್ರೀತ್ 30 ಎಸೆತಗಳಲ್ಲಿ 51 ರನ್ ಸಿಡಿಸಿ ಅವರು ತಂಡದ ಮೊತ್ತವನ್ನು ಹೆಚ್ಚಿಸಿದರು. ಅವರ ಬ್ಯಾಟ್ನಿಂದ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ಗಳು ದಾಖಲಾದವು. ಅಮೆಲಿಯಾ ಕೆರ್ (19; 13ಎ) ಬಿಟ್ಟರೆ ತಂಡದ ಉಳಿದ ಬ್ಯಾಟರ್ಗಳು ಹೆಚ್ಚು ರನ್ ಗಳಿಸಲಿಲ್ಲ.
ಇಂದಿನ ಪಂದ್ಯ: ಆರ್ಸಿಬಿ– ಯುಪಿ ವಾರಿಯರ್ಸ್
ಆರಂಭ: ರಾತ್ರಿ 7.30