ಸಂಪಾಜೆ: ಸೋಮಶೇಖರ ಕೊಯಿಂಗಾಜೆ ಅವರು ಕಳೆದ 28 ವರ್ಷಗಳಿಂದ ಸಂಪಾಜೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ, ಪಕ್ಷದ ಏಳಿಗೆಗೆ ಅಪಾರ ಶ್ರಮವಹಿಸಿದ್ದಾರೆ. ಇಂತಹ ಅನುಭವಿ ನಾಯಕರು ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿರುವುದು ಕಾರ್ಯಕರ್ತರಿಗೆ ಹಾಗೂ ನಾಯಕರಿಗೆ ಅತೀವ ದುಃಖ ತಂದಿದೆ. ಆದುದರಿಂದ
ಅವರು ತಮ್ಮ ರಾಜಿನಾಮೆ ಹಿಂಪಡೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ ಹೇಳಿದ್ದಾರೆ. ಸಂಪಾಜೆ ಭಾಗದಲ್ಲಿ ಪಕ್ಷ ಸಂಘಟನೆಗೆ ಶ್ರಮ ವಹಿಸಿದ್ದ ಬಹುಸಂಖ್ಯಾತರ ಪ್ರಬಲ ಸಮುದಾಯದ ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡು ಸಹಕಾರಿ, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಛಾಪನ್ನು ಮೂಡಿಸಿದವರು ಅವರು. ಉನ್ನತ ಹುದ್ದೆಗಳ ಅವಕಾಶಗಳಿದ್ದರು ಅದೆಲ್ಲವನ್ನು ಬಿಟ್ಟು ಸಂಪಾಜೆಯಲ್ಲೇ ನಿಂತು ತಳಮಟ್ಟದಿಂದ ಪಕ್ಷವನ್ನು ಕಟ್ಟಿಬೆಳೆಸಿದಂತಹ ಸೋಮಶೇಖರ್ ಕೊಯಿಂಗಾಜೆಯವರ ನಾಯಕತ್ವ ಇನ್ನು ಕೂಡ ಸಂಪಾಜೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












