ಬೆಂಗಳೂರು:ದ.ಕ ಜಿಲ್ಲೆಯಲ್ಲಿ ಮಾದಕದ್ರವ್ಯ ನಿಯಂತ್ರಣಕ್ಕೆ ಲೋಕಸಭೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ. ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇರೆ ಮೀರಿರುವ ಮಾದಕದ್ರವ್ಯ ವ್ಯಸನ ಮತ್ತು ಮಾರಾಟದ ಚಟುವಟಿಗೆಗಳ’ ಕುರಿತು ಸದನದ ಗಮನವ ಸೆಳೆದರು. ಪ್ರತಿ ತಿಂಗಳ ಮಾಧ್ಯಮಗಳ
ಹೆಡ್ಲೈನ್ಗಳನ್ನು ಗಮನಸಿದರೆ ನಗರದಲ್ಲಿ ಡ್ರಗ್ಸ್ನ ಅತಿರೇಕದ ಚಟುವಟಿಕೆಗಳನ್ನು ಸ್ಪಷ್ಟವಾಗಿ ಕಟಣುತಿದೆ. ಮಂಗಳೂರು ನಗರವು ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳ ಕೇಂದ್ರವಾಗಿರುವುದರಿಂದ ದೇಶದಾದ್ಯಂತದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮಾದಕದ್ರವ್ಯ ಚಟುವಟಿಗಳನ್ನು ಮಟ್ಟ ಹಾಕಬೇಕಾಗಿದೆ. ಆದ್ದರಿಂದ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಮಾದಕದ್ರವ್ಯದ ಜಾಲವನ್ನು ಬುಡ ಸಮೇತ ಕಿತ್ತುಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದರು ಸಲ್ಲಿಸಿದ ನೋಟೀಸ್ನಲ್ಲಿ ಉಲ್ಲೇಖಿಸಲಾಗಿದೆ.