ಮೊರಾಕ್ಕೊ: ಉತ್ತರ ಆಫ್ರಿಕಾ ದೇಶವಾದ ಮೊರಾಕೊ ಪ್ರಬಲ ಭೂಂಕಪದಿಂದಾಗಿ ಅಕ್ಷರಶಃ ನಲುಗಿದೆ. 600ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹಲವು ಕಟ್ಟಡಗಳು ಧರೆಗುರುಳಿವೆ. ಮನೆ, ತಮ್ಮವರನ್ನು ಕಳೆದುಕೊಂಡ ಜನರ ಆಕ್ರಂದನ
ಮುಗಿಲು ಮುಟ್ಟಿದೆ. ದೇಶದ ನೈರುತ್ಯ ದಿಕ್ಕಿನಲ್ಲಿ 72 ಕಿ.ಮೀ. ದೂರದಲ್ಲಿರುವ ಪ್ರಮುಖ ಪ್ರವಾಸಿ ತಾಣ ಮಾರ್ರಾಕೇಶ್ನಲ್ಲಿ ರಾತ್ರಿ 11.11ಕ್ಕೆ ಸಂಭವಿಸಿದ ಭೂಕಂಪನ, ರಿಕ್ಟರ್ ಮಾಪನದಲ್ಲಿ 6.8 ತೀವ್ರತೆ ಇತ್ತು. ಇದರ ತೀವ್ರತೆಯನ್ನು ತೀರ ಪ್ರದೇಶಗಳಾದ ರಬಾಟ್, ಕಾಸಾಬ್ಲಾಂಕಾ ಹಾಗೂ ಎಸ್ಸೂರಿಯಾಗಳೂ ಅನುಭವಿಸಿವೆ. ಸರಕಾರದ ಮಾಹಿತಿಯಂತೆ ಈವರೆಗೂ 632 ಜನ ಮೃತಪಟ್ಟಿದ್ದಾರೆ. 329 ಜನ ಗಾಯಗೊಂಡಿದ್ದಾರೆ. ಇವರಲ್ಲಿ 51 ಜನರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಮೊರಾಕೊದಲ್ಲಿ ಸಂಭವಿಸಿದ ಭೂಕಂಪನದ ಅನುಭವ ಪಕ್ಕದ ಅಲ್ಜೇರಿಯಾ ಜನರಿಗೂ ಆಗಿದೆ. 2004ರಲ್ಲಿ ಸಂಭವಿಸಿದ ಭೂಕಂಪದಲ್ಲಿ 628 ಜನ ಮೃತಪಟ್ಟಿದ್ದರು. 926 ಜನರ ಗಾಯಗೊಂಡಿದ್ದರು.





