ಸಂಪಾಜೆ: ನಾಡ ಪ್ರಭು ಕೆಂಪೇಗೌಡ ಕಂಚಿನ ಪ್ರತಿಮೆ ಉದ್ಘಾಟನೆಯ ಅಂಗವಾಗಿ ನಡೆಯುವ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ರಥಕ್ಕೆ ಸಂಪಾಜೆಯಲ್ಲಿ ಸ್ವಾಗತ ನೀಡಿ ಮೂಲ ಮೃತ್ತಿಕೆ ಸಂಗ್ರಹ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಕೆಂಪೇಗೌಡ ರಥಕ್ಕೆ ಪುಷ್ಪಾರ್ಚನೆ ಮಾಡಿ ಪವಿತ್ರ ಮಣ್ಣು ಸಮರ್ಪಿಸಿದರು. ಗ್ರಾ.ಪಂ.
ಮಾಜಿ ಅಧ್ಯಕ್ಷ ಕೆ. ಪಿ. ಜಗದೀಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ , ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ಜಗದೀಶ್ ರೈ, ಅಬೂಸಾಲಿ ಗೂನಡ್ಕ, ಎಸ್. ಕೆ. ಹನೀಫ್, ಸುಮತಿ ಶಕ್ತಿವೇಲು, ರಜನಿ ಶರತ್. ವಿಜಯಕುಮಾರ್, ವಿಮಲಾ, ಸಹಕಾರಿ ಸಂಘದ ನಿರ್ದೇಶಕಿ ಯಮುನಾ. ಬಿ. ಎಸ್. ರಾಜೀವೀ, ಚಂದ್ರಶೇಖರ, ಗ್ರಾಮ ಕರಣಿಕರಾದ ಮಿಯಾ ಶಾಬ್ ಮುಲ್ಲಾ, ಗ್ರಾಮ ಸಹಾಯಕ ಸೋಮನಾಥ್,ಪಂಚಾಯತ್ ಕಾರ್ಯದರ್ಶಿ ಪದ್ಮಾವತಿ, ಪ್ರಮುಖರಾದ ಕಿಶೋರ್ ಕುಮಾರ್, ಕೇಶವ ಬಂಗ್ಲೆಗುಡ್ಡೆ, ಸವಿನ, ಉಮೇಶ್, ಭರತ್, ಗೋಪಮ್ಮ, ಸವಿತಾ ಕಿಶೋರ್, ಮಧುರ, ನಸೀಮಾ, ಕಾಂತಿ ಬಿ.ಎಸ್. ಯಶೋದಾ, ಸೌಮ್ಯ. ನಾಗೇಶ್ ಪಿ.ಆರ್ ಮತ್ತಿತರರು ಉಪಸ್ಥಿತರಿದ್ದರು.