ವಯನಾಡ್: ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಪ್ರದೇಶಕ್ಕೆ ಚಪನಚಿತ್ರ ನಟ ಹಾಗೂ ಭಾರತೀಯ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿರುವ ಮೆಗಾಸ್ಟಾರ್ ಮೋಹನ್ ಲಾಲ್ ಅವರು ಶನಿವಾರ ಭೇಟಿ ನೀಡಿದರು. ಸೇನಾ ಸಮವಸ್ತ್ರ ಧರಿಸಿ ಮೋಹನ್ಲಾಲ್ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡಿದರು. ಸೇನಾ ಕ್ಯಾಂಪ್ಗೆ ಆಗಮಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ಅವರು
ಮುಂಡಕ್ಕೈ, ಪುಂಜಿರಿಮಟ್ಟಂ ಪ್ರದೇಶಕ್ಕೆ ಭೇಟಿ ನೀಡಿದರು.
ಕೋಝಿಕ್ಕೋಡ್ನಿಂದ ರಸ್ತೆ ಮಾರ್ಗವಾಗಿ ವಯನಾಡಿಗೆ ಆಗಮಿಸಿದ್ದರು. 2009 ರಲ್ಲಿ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ತಮ್ಮ ವಿಶ್ವಶಾಂತಿ ಫೌಂಢೇಷನ್ ವತಿಯಿಂದ ವಯನಾಡಿಗೆ ಪರಿಹಾರ ಕಾರ್ಯಕ್ಕೆ ಮೊದಲ ಹಂತದಲ್ಲಿ 3 ಕೋಟಿ ರೂ ನೀಡುವುದಾಗಿ ತಿಳಿಸಿದರು. ದುರಂತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ
ನಿಸ್ವಾರ್ಥ ಸ್ವಯಂಸೇವಕರು, ಪೊಲೀಸರು, ಅಗ್ನಿಶಾಮಕ ಮತ್ತು ರಕ್ಷಣೆ, ಎನ್ಡಿಆರ್ಎಫ್, ಸೈನಿಕರು, ಸರ್ಕಾರಿ ಅಧಿಕಾರಿಗಳು ಮತ್ತು ದಣಿವರಿಯಿಲ್ಲದೆ ದುಡಿಯುತ್ತಿರುವ ಪ್ರತಿಯೊಬ್ಬ ವ್ಯಕ್ತಿಗಳ ಸೇವೆ ಶ್ಲಾಘನೀಯವಾದುದು. ಕಡಿಮೇ ಅವಧಿಯಲ್ಲಿ ಸೈನಿಕರು ನಿರ್ಮಿಸಿದ ಬೈಲಿ ಸೇತುವೆ ದೊಡ್ಡ ಅದ್ಭುತ ಎಂದ ಅವರು ಸಂತ್ರಸ್ತರಿಗೆ ಪರಿಹಾರ ಒದಗಿಸಲು, ಪರಿಹಾರ ಕಾರ್ಯಾಚರಣೆಯಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯಾಚರಣೆ ನಡೆಸೋಣ ಎಂದರು.