ಕೊಚ್ಚಿ: ಮಲಯಾಳ ಚಿತ್ರರಂಗದಲ್ಲಿ ಕಲಾವಿದೆಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ನ್ಯಾ. ಹೇಮಾ ಸಮಿತಿ ವರದಿ ಬೆಳಕು ಚೆಲ್ಲುತ್ತಿದ್ದಂತೆ ‘ಮಲಯಾಳಂ ಸಿನಿಮಾ ರಂಗದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಇದರ ಮುಂದುವರಿದ ಭಾಗವಾಗಿ ಮಲಯಾಳಂ ಸಿನಿಮಾ ಕಲಾವಿದರ ಸಂಘ’ (ಅಮ್ಮ)ದ ಅಧ್ಯಕ್ಷ ಖ್ಯಾತ ನಟ ಮೋಹನ್ಲಾಲ್ ಸೇರಿ ಎಲ್ಲಾ
17 ಸದಸ್ಯರು ರಾಜೀನಾಮೆ ನೀಡಿದ್ದಾರೆ. ಆಡಳಿತ ಸಮಿತಿಯ ಎಲ್ಲಾ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಸಾಮಾನ್ಯ ಸಭೆಯ ಬಳಿಕ ಎರಡು ತಿಂಗಳ ಒಳಗೆ ಹೊಸ ಆಡಳಿತ ಸಮಿತಿ ರಚನೆಯಾಗಲಿದೆ’ ಎಂದು ಸಂಘ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಹೇಮಾ ಸಮಿತಿ ವರದಿ ಹೊರ ಬಂದ ಬಳಿಕ ಹಲವು ಮಂದಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ.
ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಚಲನ ಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ನಿರ್ದೇಶಕ ರಂಜಿತ್, ‘ಅಮ್ಮ’ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಿದ್ದೀಕ್ ರಾಜೀನಾಮೆ ನೀಡಿದ್ದರು.