ಸುಳ್ಯ: ಸೋಣಂಗೇರಿ ಬಯಲು ಚಿತ್ರಾಲಯದ ರೂವಾರಿ ದಿವಂಗತ ಮೋಹನ ಸೋನ ಅವರ ಪುಣ್ಯಸ್ಮರಣೆ ಕಾರ್ಯಕ್ರಮವು ರವಿವಾರ ಸಂಜೆ ಸೋಣಂಗೇರಿಯ ಮೋಹನ ಸೋನಾ ಆರ್ಟ್ ಗ್ಯಾಲರಿ ಆವರಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಅವರು ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ
ಎಂ.ಜಿ. ಕಜೆ, ಸುದೇಶ್ ಮಹಾನ್, ಚಂದ್ರಹಾಸ ಉಳ್ಳಾಲ್, ಜೀವನ್ ರಾಮ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮೋಹನ ಸೋನ ಅವರ ಮಕ್ಕಳಾದ ಮೃಣಾಲಿನಿ ಸೋನ ಮತ್ತು ಗಗನ ಸೋನ ಸ್ವಾಗತಿಸಿದರು. ಮಾಧವಿ ಸೋನ, ಕುಟುಂಬಸ್ಥರು, ಅಭಿಮಾನಿಗಳು ಉಪಸ್ಥಿತರಿದ್ದರು.
ಬಳಿಕ ಆಯನ ನಾಟಕದ ಮನೆ, ಮಂಗಳೂರು ತಂಡದವರು ‘ಅಶ್ವತ್ಥಾಮ’ ನಾಟ್ ಔಟ್ ನಾಟಕವನ್ನು ಪ್ರದರ್ಶಿಸಿದರು.ನಾಟಕದ ರಚನೆ, ವಿನ್ಯಾಸ ಹಾಗೂ ನಿರ್ದೇಶನವನ್ನು ಮೋಹನ ಚಂದ್ರ ವಹಿಸಿದ್ದರು. ಸಂಗೀತವನ್ನು ಶೀನಾ ನಾಡೋಳಿ ಸಂಯೋಜಿಸಿದ್ದರು. ಸಂಗೀತ ನಿರ್ವಹಣೆಯಲ್ಲಿ ನವ್ಯಾ, ಬೆಳಕು ವಿನ್ಯಾಸದಲ್ಲಿ ಶ್ರಾವಿಕ್ ಅಡ್ಕ ಹಾಗೂ ರಂಗ ನಿರ್ವಹಣೆಯಲ್ಲಿ ಚಂದ್ರಿಕಾ ಉಳ್ಳಾಲ್ ಸಹಕರಿಸಿದರು.





