ಸುಳ್ಯ: ಮೊಗರ್ಪಣೆ ಹಝ್ರತ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್ ಅಸ್ಸಖಾಫ್ ಅಲ್ ಖಾದಿರಿ ಮಖಾಂ ಉರೂಸ್ಗೆ ಚಾಲನೆ ದೊರೆತಿದೆ. ಫೆ.24ರಿಂದ 26 ರ ತನಕ ನಡೆಯಲಿದೆ.ಅಸ್ಸಯ್ಯದ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ಅಚರಿಸುವ ಉರೂಸ್ ನೇರ್ಚೆ ಹಾಗು ಮೂರು ದಿನಗಳ ಧಾರ್ಮಿಕ ಮತ ಪ್ರಭಾಷಣ, ಮೌಲೀದ್ ಮಜ್ಲೀಸ್ ಹಾಗೂ ಸುಪ್ರಸಿದ್ಧ ಇಸ್ಲಾಮಿಕ್ ಗಾಯಕ ಕೋಯ ಕಾಪಾಡ್ ತಂಡದಿಂದ ಕವಾಲಿ ಹಾಗೂ ಇಷಲ್ ನೈಟ್ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 24ರಂದು


ಸಂಜೆ 4.30ಕ್ಕೆ ಅಸ್ಸಯಿದ್ ಅಶ್ರಫ್ ತಂಙಳ್ ಆದೂರು ರವರ ನೇತೃತ್ವದಲ್ಲಿ ದ್ಸಿಕ್ರ್ ಹಲ್ಕ ಕಾರ್ಯಕ್ರಮ ನಡೆಯಲಿದೆ.
ಅಂದು ಸಂಜೆ 7 ಕ್ಕೆ ನಡೆಯುವ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮವನ್ನು ಅಸ್ಸಯ್ಯಿದ್ ಕುಂಞಿ ಕೋಯಾ ತಂಙಳ್ ಸಅದಿ ಉದ್ಘಾಟಿಸಲಿದ್ದಾರೆ. ಮುಖ್ಯ ಪ್ರಭಾಷಣವನ್ನು ಖ್ಯಾತ ವಾಗ್ಮಿ ಕಬೀರ್ ಇಮಮಿ ಸಕಾಫಿ ಕಾಸರಗೋಡು ಇವರು ಮಾಡಲಿದ್ದಾರೆ. ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧ್ಯಕ್ಷ ಹಾಜಿ ಇಬ್ರಾಹಿಂ ಸಿ ಫುಡ್ ಅಧ್ಯಕ್ಷತೆ ವಹಿಸಲಿದ್ದಾರೆ.
ಫೆ.25ರಂದು ಸಂಜೆ 7ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಸಯ್ಯಿದ್ ಫಜಲ್ ಕೊಯಮ್ಮ ತಂಙಳ್ ಕೂರತ್ ರವರ ನೇತೃತ್ವದಲ್ಲಿ ಖತಂ ದುವಾ ಮಜ್ಲೀಸ್ ನಡೆಯಲಿದೆ.
ಬಳಿಕ ನಡೆಯುವ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮದಲ್ಲಿ ವಾಗ್ಮಿ ಹಾಫಿಲ್ ಮಶ್ಹೂದ್ ಸಖಾಫಿ ಗೂಡಲ್ಲೂರು ಪ್ರಭಾಷಣ ನಿರ್ವಹಿಸಲಿದ್ದಾರೆ.
ಫೆಬ್ರವರಿ 26ರಂದು ಸಂಜೆ ಮಗರಿಬ್ ನಮಾಜ್ ಬಳಿಕ ದರ್ಗಾದಲ್ಲಿ ಮೌಲಿದ್ ಪಾರಾಯಣ ನಡೆಯಲಿದ್ದು,
ಅಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸುಪ್ರಸಿದ್ಧ ಇಸ್ಲಾಮಿಕ್ ಗಾಯಕ ಕೋಯ ಕಾಪಾಡ್ ತಂಡದವರಿಂದ ಕವಾಲಿ ಹಾಗೂ ಇಶಲ್ ನೈಟ್ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವನ್ನು ಸ್ಥಳಿಯ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಿ ಫುಡ್ ವಹಿಸಲಿದ್ದಾರೆ.
ಸಾಮೂಹಿಕ ದುವಾ ಕಾರ್ಯಕ್ರಮಕ್ಕೆ ಅಸ್ಸಯ್ಯಿದ್ ಮುಹಮ್ಮದ್ ಶಮೀಮ್ ತಂಙಳ್ ಕುಂಬೋಳ್ ನೇತೃತ್ವ ನೀಡಲಿದ್ದು
ಮುಖ್ಯ ಪ್ರಭಾಷಣವನ್ನು ಹಂಝ ಮಿಸ್ಬಾಯಿ ಓಟಪದವು ಮಾಡಲಿದ್ದಾರೆ.
ವೇದಿಕೆಯಲ್ಲಿ ಗಾಂಧಿನಗರ ಜುಮಾ ಮಸೀದಿ ಕತೀಬರಾದ ಅಶ್ರಫ್ ಕಾಮಿಲ್ ಸಕಾಫಿ ಸೇರಿದಂತೆ ವಿವಿಧ ನೇತಾರರು ಉಪಸ್ಥಿತರಿರುತ್ತಾರೆ ಎಂದು ಹೆಚ್ಐಜೆ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.