ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 9 ಮಾದರಿ ಮತಗಟ್ಟೆಗಳಿವೆ. ಮತದಾರರನ್ನು ಸೆಳೆಯಲು ಈ ರೀತಿ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿಶೇಷ ಶೃಂಗಾರಗೊಂಡು ಈ ಮತಗಟ್ಟೆಗಳು ಗಮನ ಸೆಳೆಯುತಿದೆ. 5 ಸಖಿ ಮತಗಟ್ಟೆಗಳು, ತಲಾ ಒಂದು ಯುವ, ಪಿಡಬ್ಲ್ಯಡಿ, ಧ್ಯೆಯ, ಸಾಂಪ್ರದಾಯಿಕ ಮತಗಟ್ಟೆಗಳವೆ.ಸುಳ್ಯ ಕ್ಷೇತ್ರದಲ್ಲಿ 5 ಸಖಿ ಮತಗಟ್ಟೆಗಳಿರಲಿದೆ. ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜಡ್ಕ (ಪೂರ್ವಭಾಗ), ಬೆಳ್ಳಾರೆ ಗ್ರಾ.ಪಂ. ವ್ಯಾಪ್ತಿಯ
ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢಶಾಲಾ ವಿಭಾಗ), ಗುತ್ತಿಗಾರು ಗ್ರಾ.ಪಂ. ವ್ಯಾಪ್ತಿಯ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು (ಪೂರ್ವಭಾಗ), ಕಡಬ ತಾಲೂಕಿನ ಕಡಬ ಗ್ರಾ.ಪಂ.ವ್ಯಾಪ್ತಿಯ ಸರಕಾರಿ ಪದವಿಪೂರ್ವ ಕಾಲೇಜು ಕಡಬ (ಪೂರ್ವಭಾಗ), ಕಡಬ ತಾಲೂಕಿನ ಬಿಳಿನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆ(ಉತ್ತರ ಭಾಗ)ಯನ್ನು ಸಖಿ ಮತಗಟ್ಟೆಗಳಾಗಿ ಗುರುತಿಸಲಾಗಿದೆ.
ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ನಾರ್ಣಕಜೆ ಅಂಗವಿಕಲರ ನಿರ್ವಹಣೆಯ ಮತಗಟ್ಟೆಯಾಗಿ, ಕಡಬ ತಾಲೂಕಿನ ರಾಮಕುಂಜ ವ್ಯಾಪ್ತಿಯ ಗ್ರಾಮ ಪಂಚಾಯಿತಿ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ರಾಮಕುಂಜದಲ್ಲಿ ಯುವ ಮತಗಟ್ಟೆಯಾಗಿ ಮಾಡಲಾಗಿದೆ. ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಕುಟ್ರುಪಾಡಿ (ಪಶ್ಚಿಮ ಭಾಗ) ಧೈಯ ಆಧಾರಿತ ಮತಗಟ್ಟೆಯಾಗಿ, ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಗುಂಡಿ ಸಂಪಾಜೆ (ಹಳೆಯ ಕಟ್ಟಡ) ಸಾಂಪ್ರದಾಯಿಕ ಮತಗಟ್ಟೆಯಾಗಿ ಗುರುತಿಸಿ ಶೃಂಗರಿಸಲಾಗಿದೆ. ಶೃಂಗಾರಗೊಂಡು ಮನ ಸೆಳೆಯುವ ಈ ಮತಗಟ್ಟೆಗಳು ಮತದಾರರನ್ನು ಕೈ ಬೀಸಿ ಕರೆಯುತಿದೆ.