ಸುಳ್ಯ:ಸುಳ್ಯದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಎದುರು ಆವಂತಿ ಕೆಫೆ ಹೋಟೆಲ್ನ ಬಳಿಯಲ್ಲಿ ‘ಮೊಬೈಲ್ ಮಾಸ್ಟರ್’ ಮೊಬೈಲ್ ಸೇಲ್ಸ್ ಸರ್ವಿಸ್ ಮಳಿಗೆ ಅ.10ರಂದು ಶುಭಾರಂಭಗೊಂಡಿದೆ.
ಸುಳ್ಯದಲ್ಲಿ ಮೊಬೈಲ್ ಉದ್ಯಮದಲ್ಲಿ ಜನಪ್ರಿಯತೆಯನ್ನು ಗಳಿಸಿರುವ ಸೆಲ್ ಹೌಸ್ ಮೊಬೈಲ್ ಸಂಸ್ಥೆ 14ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಶುಭ ಸಂದರ್ಭದಲ್ಲಿ ಅದರ ಸಹಸಂಸ್ಥೆಯಾಗಿ ಮೊಬೈಲ್ ಮಾಸ್ಟರ್ ಶುಭಾರಂಭಗೊಂಡಿದೆ.ನೂತನ
ಸಂಸ್ಥೆಯನ್ನುಝೈನುಲ್ ಆಬಿದಿನ್ ತಂಙಳ್ ದುಗ್ಗಲಡ್ಕ ಉದ್ಘಾಟಿಸಿ ಶುಭ ಹಾರೈಸಿದರು.ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್, ಮೀಫ್ ಉಪಾಧ್ಯಕ್ಷ ಕೆ.ಎಂ.ಮುಸ್ತಾಫ, ಜಾಲ್ಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ನಡುವಡ್ಕ, ಜಿ.ಎಂ.ಅಬ್ದುಲ್ಲ ಕುಂಞಿ ಗೂನಡ್ಕ, ರಝಾಕ್ ಸಂಟ್ಯಾರ್, ಸುಳ್ಯ ಮೊಬೈಲ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ರಹಿಮಾನ್,
ಕತ್ತರ್ ಇಬ್ರಾಹಿಂ ಹಾಜಿ ಮಂಡೆಕೋಲು, ವಕೀಲರಾರ ಮಹಮ್ಮದ್ ಫವಾಜ್ ಕನಕಮಜಲು, ಲತೀಫ್ ಪಾರೆ, ಮೊಯಿದು ಪಾರೆ,ಲತೀಫ್ ಅಡ್ಕಾರ್,, ಮೊದಲಾದವರು ಉಪಸ್ಥಿತರಿದ್ದರು.ಸಂಸ್ಥೆಯ ಪಾಲುದಾರರಾದ ಹ್ಯಾರಿಸ್ ಮಂಡೆಕೋಲು ಮತ್ತು ಅಹಮ್ಮದ್ ದಿಯಾ ಅತಿಥಿಗಳನ್ನು ಸ್ವಾಗತಿಸಿದರು.ಶುಭಾರಂಭದ ನಿಮಿತ್ತ ಗ್ರಾಹಕರಿಗಾಗಿ ವಿಶೇಷ ಆಫರ್ ಲಭ್ಯವಿದೆ. ಶುಭಾರಂಭದ ನಿಮಿತ್ತ, ದಸರಾ ಹಾಗೂ ದೀಪಾವಳಿ ಪ್ರಯುಕ್ತ ಬಿಗ್ ಸೇಲ್ ಆರಂಭವಾಗಿದ್ದು ವಿಶೇಷ ಆಫರ್ಗಳನ್ನು ನೀಡಲಾಗುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ