ಸುಳ್ಯ:ಸುಳ್ಯದ ಅತೀ ದೊಡ್ಡ ಮೊಬೈಲ್ ಶೋರೂಮ್ ಹಾಗೂ ಡಿಜಿಟಲ್ ಶೋರೂಮ್ ಆಗಿರುವ ‘ಮೊಬೈಲ್ ಗ್ಯಾರೇಜ್’ ಮೊಬೈಲ್ ಮಳಿಗೆಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಹಮ್ಮಿಕೊಂಡ ಅದೃಷ್ಟ ಕೂಪನ್ನ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ
ಫೆ.4ರಂದು ನಡೆಯಿತು. ಧನಲಕ್ಷ್ಮಿ ಜ್ಯುವೆಲರಿ ಮಾಲಕ ಪ್ರಭಾಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಪ್ರಥಮ ಬಹುಮಾನ ಐಫೋನ್ ಅಕ್ಷಯ್ ದುಗಲಡ್ಕ, ದ್ವಿತೀಯ ಬಹುಮಾನ ಎಲ್ಇಡಿ ಟಿವಿ ಬೋಪಯ್ಯ ಮಡಿಕೇರಿ ,ತೃತೀಯ ಬಹುಮಾನ ಹೋಮ್ ಥಿಯೇಟರ್ ದೀಕ್ಷಿತ್ ಮಂಡೆಕೋಲು , ಚತುರ್ಥ ಬಹುಮಾನ ಮಿಕ್ಸಿ ಮಧುಶ್ರೀ ಪೆರಾಜೆಯವರು ಆಗಮಿಸಿ ಪಡೆದುಕೊಂಡು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಸಂಸ್ಥೆಯ ಮಾಲಕ ಹಸೈನಾರ್ರವರು ಸ್ವಾಗತಿಸಿದರು, ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.
ಪತ್ರಕರ್ತೆ ಪೂಜಾಶ್ರೀ ವಿತೇಶ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.





