ಸುಳ್ಯ:ಸುಳ್ಯದ ಅತೀ ದೊಡ್ಡ ಮೊಬೈಲ್ ಶೋರೂಮ್ ಹಾಗೂ ಡಿಜಿಟಲ್ ಶೋರೂಮ್ ಆಗಿರುವ ‘ಮೊಬೈಲ್ ಗ್ಯಾರೇಜ್’ ಮೊಬೈಲ್ ಮಳಿಗೆಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಹಮ್ಮಿಕೊಂಡ ಅದೃಷ್ಟ ಕೂಪನ್ನ ಡ್ರಾ ಜ.31ರಂದು ನಡೆಸಲಾಯಿತು. ಪ್ರಥಮ ಬಹುಮಾನ ಐಫೋನ್ ಅದೃಷ್ಟ
ಅಕ್ಷಯ ಅವರ 7735 ನಂಬರ್ನ ಟಿಕೆಟ್ಗೆ ದೊರೆತಿದೆ. ದ್ವಿತೀಯ ಬಹುಮಾನ ಎಲ್ಇಡಿ ಟಿವಿ ಬೋಪಯ್ಯ ಎಂಬವರ 5227 ನಂಬರ್ಗೆ, ತೃತೀಯ ಬಹುಮಾನ ಹೋಮ್ ಥಿಯೇಟರ್ ದೀಕ್ಷಿತ್ ಎಂಬವರ 5678 ನಂಬರ್ಗೆ ಹಾಗೂ ಚತುರ್ಥ ಬಹುಮಾನ ಮಿಕ್ಸಿ ಮಧುಶ್ರೀ ಎಂಬವರ 5806 ನಂಬರ್ಗೆ ಲಭಿಸಿದೆ.

ಸುಳ್ಯ ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ.ಸುಧಾಕರ ರೈ, ಎಂ.ಬಿ.ಫೌಂಡೇಶನ್ನ ಅಧ್ಯಕ್ಷ ಎಂ.ಬಿ.ಸದಾಶಿವ, ಮೊಬೈಲ್ ಅಸೋಸಿಯೇಷನ್ನ ಅಧ್ಯಕ್ಷ ಅಬ್ದುಲ್ ರಹಿಮಾನ್, ಸೀಮಾ ಆರ್ಟ್ಸ್ನ ಜಯಂತ ರೈ, ಬಜಾಜ್ ಫೈನಾನ್ಸ್ನ ದಿಲೀಪ್ ಅವರು ಅದೃಷ್ಟ ಕೂಪನ್ ಡ್ರಾ ನಡೆಸಿದರು.ಮೊಬೈಲ್ ಗ್ಯಾರೇಜ್ನ ಮಾಲಕ ಹಸೈನಾರ್ ಮಾತನಾಡಿದರು.
ಪತ್ರಕರ್ತೆ ಪೂಜಾಶ್ರೀ ವಿತೇಶ್ ಕೋಡಿ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ದರ ಕಡಿತ ಮಾರಾಟ, ಕೂಪನ್ ನೀಡಲಾಗಿತ್ತು.
ಪ್ರತಿ 100 ರೂ ಮೇಲ್ಪಟ್ಟ ಖರೀದಿಗೆ ಉಚಿತ ಲಕ್ಕಿ ಕೂಪನ್ ನೀಡಲಾಗಿದ್ದು. ಡ್ರಾ ವಿಜೇತರಿಗೆ ಲೇಟೆಸ್ಟ್ ಎಡಿಷನ್ ಐಫೋನ್ ಬಹುಮಾನವಾಗಿ ನೀಡಲಾಗುತ್ತದೆ.
ಮೊಬೈಲ್ ಗ್ಯಾರೇಜ್ನಲ್ಲಿಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಎಲ್ಇಡಿ ಟಿವಿಗಳು ಸುಲಭ ಕಂತುಗಳಲ್ಲಿ ಲಭ್ಯವಿದೆ. ಅತೀ ಕಡಿಮೆ ದಾಖಲೆಯೊಂದಿಗೆ ಸುಲಭ ಕಂತುಗಳಲ್ಲಿ ಕನಸಿನ ಸ್ಮಾರ್ಟ್ ಫೋನ್, ಟಿವಿ, ಲ್ಯಾಪ್ಟಾಪ್ ನಿಮ್ಮದಾಗಿಸಲು ಲೋನ್ ಪಡೆಯುವ ಅವಕಾಶವೂ ಇದೆ. ಕಿಲೋಮೀಟರ್ಗಳ ನಿರ್ಬಂಧ ಇಲ್ಲದೆ 0% ಬಡ್ಡಿ ದರದಲ್ಲಿ 24 ತಿಂಗಳ ತನಕ ಇಎಂಐ ಸೌಲಭ್ಯ ಲಭ್ಯವಿದೆ.
ಮೆಗಾ ಎಕ್ಸೇಂಜ್ ಆಫರ್ ಚಾಲ್ತಿಯಲ್ಲಿದ್ದು ಹಳೆಯ ಮೊಬೈಲ್ಗೆ ಬದಲಾಗಿ ಹೊಸ ಸ್ಮಾರ್ಟ್ ಫೋನ್ ಪಡೆಯಬಹುದು. ಸುಲಭವಾಗಿ ಹಳೆಯ ಮೊಬೈಲ್ಗಳನ್ನು ಹೊಸ ಮೊಬೈಲ್ ಫೋನ್ಗಳೊಂದಿಗೆ ಬದಲಾಯಿಸಬಹುದು. ಎಂದು ಮೊಬೈಲ್ ಗ್ಯಾರೇಜ್ನ ಮಾಲಕರು ತಿಳಿಸಿದ್ದಾರೆ.
ಸುಳ್ಯದ ಮುಖ್ಯ ರಸ್ತೆಯಲ್ಲಿ ಬಾಳೆಮಕ್ಕಿ ಕಟ್ಟಡದಲ್ಲಿ ಕಾರ್ಯಾಚರಿಸುವ ಮೊಬೈಲ್ ಗ್ಯಾರೇಜ್ ಮಳಿಗೆಯಲ್ಲಿ ಎಲ್ಲಾ ಕಂಪೆನಿಯ ಸ್ಮಾರ್ಟ್ ಫೋನ್, ಮೊಬೈಲ್ ಎಸ್ಸೆಸರೀಸ್ಗಳ ಮತ್ತು ಸ್ಮಾರ್ಟ್ ವಾಚ್ ಖರೀದಿಗೆ ರಿಯಾಯಿತಿ ದರ ಲಭ್ಯವಿದೆ.
ಇತ್ತೀಚಿಗೆ ಅತ್ಯಾಕರ್ಷವಾಗಿ ನವೀಕರಣಗೊಂಡು ಡಿಜಿಟಲ್ ಶೋರೂಮ್ ಆಗಿ ಮಾರ್ಪಾಡಾಗಿರುವ ಮೊಬೈಲ್ ಗ್ಯಾರೇಜ್ನಲ್ಲಿ
‘ಆಲ್ ಬ್ರಾಂಡ್ಸ್ ಅಂಡರ್ ವನ್ ರೂಫ್’ ಎಂಬ ಸಂಸ್ಥೆಯ ಟ್ಯಾಗ್ ಲೈನ್ ಹೇಳುವಂತೆ ಎಲ್ಲಾ ಕಂಪೆನಿಗಳ ಬ್ರಾಂಡೆಡ್ ಮತ್ತು ಲೇಟೆಸ್ಟ್ ಎಡಿಷನ್
ಮೊಬೈಲ್ ಫೋನ್ಗಳ ಅತ್ಯಾಕರ್ಷಕ ಸಂಗ್ರಹ ಇಲ್ಲಿ ಲಭ್ಯವಿದೆ. ಐಫೋನ್, ಸ್ಯಾಮ್ಸಂಗ್, ನೋಕಿಯಾ, ವನ್ ಪ್ಲಸ್, ಒಪ್ಪೊ, ವಿವೋ, ರಿಯಲ್ ಮಿ, ಎಂಐ ಹೀಗೆ ಎಲ್ಲಾ ಕಂಪೆನಿಗಳ ಮೊಬೈಲ್ ಫೋನ್ಗಳು ಇಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಐಫೋನ್ ಸೇರಿ ಎಲ್ಲಾ ಮೊಬೈಲ್ ಫೋನ್ಗಳ ಸರ್ವೀಸ್ ಮತ್ತು ರಿಪೇರಿ ಅತೀ ಕನಿಷ್ಠ ದರದಲ್ಲಿ ಮಾಡಿಕೊಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:8105100465





