ಸುಳ್ಯ:ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ 10ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವದಲ್ಲಿ ಮರ್ಕಂಜದ ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ ಪ್ರಥಮ ಸ್ಥಾನ ಹಾಗೂ ಹಿಂದೂ ಜಾಗರಣ ವೇದಿಕೆ ಉಬರಡ್ಕ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತೃತೀಯ ಸ್ಥಾನಕ್ಜೆ ಎರಡು
ತಂಡಗಳ ಪಾತ್ರವಾಗಿದೆ. ಹೈ ಟೋರ್ಕ್ ಮೋಟೋ ಕ್ರೂವ್ ತಂಡ ಹಾಗೂ ಜನನಿ ಫ್ರೆಂಡ್ಸ್ ಗುಂಡ್ಯ ತಂಡಗಳು ಹಂಚಿಕೊಂಡಿವೆ.
16 ತಂಡಗಳು ಭಾಗವಹಿಸಿದ್ದ ಮೊಸರು ಕುಡಿಕೆ ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ.15 ಸಾವಿರ ಮತ್ತು ಶಾಶ್ವತ ಫಲಕ, ದ್ವಿತೀಯ ಸ್ಥಾನಕ್ಕೆ 10 ಸಾವಿರ ಮತ್ತು ಶಾಶ್ವತ ಫಲಕ ನೀಡಲಾಯಿತು.ತೃತೀಯ ಬಹುಮಾನ ರೂ.7 ಸಾವಿರವನ್ನು ಎರಡು ತಂಡಗಳಿಗೆ ಹಂಚಿ ನೀಡಲಾಯಿತು.
ಚೆನ್ನಕೇಶವ ದೇವಸ್ಥಾನದ ಮುಂಭಾಗ, ಎಪಿಎಂಸಿ, ಕುರುಂಜಿಭಾಗ್, ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜ್ ರಸ್ತೆ, ಮುಳಿಯ ಮೈದಾನ ಶಾಸ್ತ್ರಿ ವೃತ್ತ, ವಿಶ್ವ ಸೆಂಟ್ರಲ್ ಶ್ರೀರಾಮಪೇಟೆ ಸುಳ್ಯ, ಶ್ರೀಹರಿ ಕಾಂಪ್ಲೆಕ್ಸ್, ರಾಜಶ್ರೀ ಕಾಂಪ್ಲೆಕ್ಸ್, ಪಂಚಾಯತ್ ಬಸ್ ನಿಲ್ದಾಣ, ನಾಯರ್ ಕಾಂಪ್ಲೆಕ್ಸ್, ಗಾಂಧಿನಗರ, ಐಡಿಯಲ್ ಆಟೋ ವರ್ಕ್ಸ್ , ಭಗವತಿ ಹಾರ್ಡ್ ವೇರ್ಸ್ ರಥಬೀದಿ ಮುಂತಾದ ಕಡೆಗಳಲ್ಲಿ ಸ್ಥಾಪಿಸಿದ ಅಟ್ಟಿ ಮಡಕೆಗಳನ್ನು ಒಡೆಯುವ ಆಕರ್ಷಕ ಸ್ಪರ್ಧೆ ಮೈ ನವಿರೇಳಿಸಿತು. 15 ಮಂದಿಯನ್ನು ಒಳಗೊಂಡ 16 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.