ಸುಳ್ಯ:ಆಯುಧ ಪೂಜೆ ಪ್ರಯುಕ್ತ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಶುಭ ಹಾರೈಸಿದರು.ಸುಳ್ಯ, ಬೆಳ್ಳಾರೆ, ಕಡಬ, ಸುಬ್ರಹ್ಮಣ್ಯ ಪೊಲೀಸ್ ಠಾಣೆ ಹಾಗೂ
ನೆಲ್ಯಾಡಿ ಹೊರ ಠಾಣೆಗೆ ಭೇಟಿ ನೀಡಿ ಆಯುಧ ಪೂಜೆಯಲ್ಲಿ ಭಾಗವಹಿಸಿದರು. ಮುಖಂಡರಾದ ಎಸ್.ಎನ್.ಮನ್ಮಥ, ಸುಬೋದ್ ಶೆಟ್ಟಿ ಮೇನಾಲ, ಸಂತೋಷ್ ಜಾಕೆ, ಶ್ರೀನಾಥ್ ಬಾಳಿಲ, ನಾರಾಯಣ ಕೇಕಡ್ಕ, ಬೂಡು ರಾಧಾಕೃಷ್ಣ ರೈ, ಸುನಿಲ್ ಕೇರ್ಪಳ, ರವಿಚಂದ್ರ ಕೊಡಿಯಾಲಬೈಲು, ಚಂದ್ರಶೇಖರ ಪನ್ನೆ, ಪದ್ಮನಾಭ ಬೀಡು ಮತ್ತಿತರರು ಉಪಸ್ಥಿತರಿದ್ದರು.