ಸುಳ್ಯ: ಮಳೆಹಾನಿ ಬಾದಿತ ಪ್ರದೇಶಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜಾರಾಂಪುರದಲ್ಲಿ ಮನೆ ಸಮೀಪ ಬೃಹತ್ ಹೊಂಡ ನಿರ್ಮಾಣ ಅದ ಸ್ಥಳ, ಗೂನಡ್ಕದಲ್ಲಿ ಮನೆಗೆ ಹಾನಿ ಸಂಭವಿಸಿದ ಸ್ಥಳ ಹಾಗೂ ಅರಂಬೂರಿನಲ್ಲಿ ಮನೆ ಸಮೀಪ ಗುಡ್ಡ ಜರಿದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯಿಂದ ಹಾನಿ
ಸಂಭಿವಿಸಿದ ಸ್ಥಳಗಳನ್ನು ಸ್ಥಳಿಯ ಪ್ರಮುಖರೊಂದಿಗೆ ವೀಕ್ಷಣೆ ಮಾಡಿ ಸ್ಥಳಕ್ಕೆ ಅಧಿಕಾರಿಗಳಿಗೆ ಭೇಟಿ ಮಾಡಿ ಸೂಕ್ತ ಕ್ರಮಕೈಗೊಳುವಂತೆ ಸೂಚಿಸಿದರು.
ಕಲ್ಪರ್ಪೆಯ ನಗರ ಪಂಚಾಯತ್ನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಶಾಸಕರು ಪರಿಶೀಲನೆ ನಡೆಸಿದರು. ಅಧಿಕಾರಿಗಳು ಹಾಗೂ ಸ್ಥಳೀಯರ ಜೊತೆ ಚರ್ಚೆ ನಡೆಸಿದರು. ತ್ಯಾಜ್ಯ ಸಮಸ್ಯೆ ಪರಿಹಾರದ ಕುರಿತು ಚರ್ಚಿಸಲು ನಗರ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸುವುದಾಗಿ ಶಾಸಕರು ತಿಳಿಸಿದರು. ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ದಯಾನಂದ ಕುರುಂಜಿ, ಭಾರತಿ ಉಳುವಾರು, ರಾಮಚಂದ್ರ ಕಲ್ಲುಗದ್ದೆ, ಜಗದೀಶ ಸರಳಿಕುಂಜ, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್ ಮತ್ತಿತರರು ಉಪಸ್ಥಿತರಿದ್ದರು.