ಸುಳ್ಯ: ಕ್ಷೇತ್ರದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಅನುದಾನ ಒದಗಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮನವಿ ಸಲ್ಲಿಸಿದ್ದಾರೆ. ಸುಬ್ರಹ್ಮಣ್ಯಕ್ಕೆ ಆಗಮಿಸಿದ ಉಪಮುಖ್ಯಮಂತ್ರಿಯವರನ್ನು ಸ್ವಾಗತಿಸಿದ ಶಾಸಕರು ಆದಿಶೇಷ ವಸತಿಗ್ರಹದಲ್ಲಿ ಮನವಿ ಸಲ್ಲಿಸಿದರು. ಹೊಸತಾಗಿ ರೂಪಗೊಂಡ
ಕಡಬ ತಾಲೂಕಿಗೆ ವಿವಿಧ ಸರಕಾರಿ ಕಚೇರಿಗಳ ಸ್ಥಾಪನೆ, ಸುಳ್ಯ ಕ್ಷೇತ್ರದ ವಿವಿಧ ಸರಕಾರಿ ಕಚೇರಿಗಳಲ್ಲಿನ ಖಾಲಿ ಹುದ್ದೆ ಭರ್ತಿ, ಸುಳ್ಯದ ಗ್ರಾಮೀಣ ಭಾಗದಲ್ಲಿ ಸೇತುವೆಗಳ ನಿರ್ಮಾಣ, ವೆಂಟೆಡ್ ಡ್ಯಾಂಗಳ ನಿರ್ಮಾಣ ಮತ್ತಿತರ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು. ಕಾಂಗ್ರೆಸ್ ಮುಖಂಡರಾದ ಆರ್.ಪದ್ಮರಾಜ್, ರಕ್ಷಿತ್ ಶಿವರಾಂ, ಎಂ.ಎಸ್.ಮಹಮ್ಮದ್, ಅಶೋಕ್ ನೆಕ್ರಾಜೆ, ಎಂ.ವೆಂಕಪ್ಪ ಗೌಡ, ಸುಧೀರ್ ಕುಮಾರ್ ಶೆಟ್ಟಿ, ಬೆಟ್ಟ ಜಯರಾಮ್ ಭಟ್, ಕಿರಣ್ ಬುಡ್ಲೆಗುತ್ತು,ವಿಮಲಾ ರಂಗಯ್ಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.