ಸುಳ್ಯ: ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಆ.28ರಂದು ಸಾರ್ವಜನಿಕ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಾರ್ವಜನಿಕರು ವಿವಿಧ ಬೇಡಿಕೆಗಳ ಅಹವಾಲು ಸಲ್ಲಿಸಿದರು. ಅಕ್ರಮ ಸಕ್ರಮ ಮಂಜೂರು, ಶಾಲಾ ಶಿಕ್ಷಕರ ಕೊರತೆ, ಅಂಗಮವಾಡಿ ಕಟ್ಟಡ, ಗ್ರಾಮೀ಼ಣ
ರಸ್ತೆಗೆ ಅನುದಾನ ಮತ್ತಿತರ ಸಾರ್ವಜನಿಕ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು. ವಿವಿಧ ವೈಯುಕ್ತಿಕ ಬೇಡಿಕೆಗಳ ಬಗ್ಗೆಯೂ ಮನವಿ ಸಲ್ಲಿಸಲಾಯಿತು.ಸುಳ್ಯ ತಾಲೂಕು ಪಂಚಾಯತ್ನ ಸುಳ್ಯ ಶಾಸಕರ ಕಚೇರಿಯಲ್ಲಿ ಮತ್ತು ಮಧ್ಯಾಹ್ನ ನಂತರ ಕಡಬ ಮಿನಿ ವಿಧಾನ ಸೌಧದಲ್ಲಿನ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ನಡೆಯಿತು