ಸುಳ್ಯ: ಸಚಿವರ ನಿರ್ದೇಶನದಂತೆ ಬಾಳಿಲ ವಾಲ್ಮೀಕಿ ಆಶ್ರಮಶಾಲೆ ನೂತನ ಕಟ್ಟಡದ ಉದ್ಘಾಟನೆ ಒಮ್ಮೆ ಮಾಡಿದರೂ ಮತ್ತೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಸಮಾಧಾನ ವ್ಯಕ್ತಪಡಿಸಿದರು. ಮತ್ತೆ ಪುನಾಃ ಉದ್ಘಾಟನೆ ಮಾಡಿರುವುದಕ್ಕೆ ತನ್ನ ಆಕ್ಷೇಪ ಇಲ್ಲ. ಆದರೆ ಅಧಕಾರಿಗಳು ಈ ಬಗ್ಗೆ
ಸರಿಯಾದ ಮಾಹಿತಿಯನ್ನು ನೀಡಿಲ್ಲ ಎಂದು ಅವರು ಹೇಳಿದರು. ಬಾಳಿದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಲಾಗಿತ್ತು. ಆದರೆ ಕಾರ್ಯಕ್ರಮ ಸುಳ್ಯದಲ್ಲಿ ಮಾಡಲಾಗಿದೆ. ಅಲ್ಲಿ ಕಾದು ಇಲ್ಲಿ ಬರುವಾಗ ಸ್ವಲ್ಪ ತಡ ಆಯಿತು. ಶಾಸಕರು ಬರಲಿ ಅಂತಾ 5 ನಿಮಿಷ ಕಾಯಬಹುದಿತ್ತು ಎಂದು ಜನತಾ ದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಶಾಸಕರು ಹೇಳಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್
ಜನತಾದರ್ಶನಕ್ಕೆ ತಡ ಆಗ ಬಾರದು ಎಂದು ಕಾರಣಕ್ಕೆ ನೇರವಾಗಿ ಬಂದೆ. ಯಾವುದೇ ಗೊಂದಲ ಮಾಡುವ ಉದ್ದೇಶ ಇರಲಿಲ್ಲ ಎಂದು ಹೇಳಿದರು.












