ಐಜ್ವಾಲ್: ಝೋರಂ ಪೀಪಲ್ಸ್ ಮೂವ್ಮೆಂಟ್ನ (ಝೆಡ್ಪಿಎಂ) ಅಧ್ಯಕ್ಷ ಲಾಲ್ದುಹೋಮಾ ಅವರು ಮಿಜೋರಾಂನ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಹರಿಬಾಬು ಕಂಭಂಪತಿ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ
11 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.40 ಸದಸ್ಯ ಬಲದ ಮಿಜೋರಾಂನಲ್ಲಿ ಝೆಡ್ಪಿಎಂ ಪಕ್ಷ 27 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಬಹುಮತ ಸಾಧಿಸಿದೆ.
ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ನಾಯಕರು ಹಾಗೂ ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಝೋರಾಂಥಂಗ, ಮಾಜಿ ಮುಖ್ಯಮಂತ್ರಿ ಲಾಲ್ ಥನ್ಹವ್ಲಾ ಪಾಲ್ಗೊಂಡಿದ್ದರು.
ಮಂಗಳವಾರ ಝೋರೊ ಪೀಪಲ್ಸ್ ಮೂವ್ ಮೆಂಟ್ ಶಾಸಕಾಂಗ ಪಕ್ಷವು ಲಾಲ್ದುಹೋಮ ಅವರನ್ನು ತಮ್ಮ ನಾಯಕ ಹಾಗೂ ಕೆ.ಸಪ್ದಂಗ ಅವರನ್ನು ಉಪ ನಾಯಕನನ್ನಾಗಿ ಚುನಾಯಿಸಿತ್ತು.









