ನವದೆಹಲಿ: ಮಿಜೋರಾಂ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ ರಾಜ್ಯದಾದ್ಯಂತ 13 ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ.ನವೆಂಬರ್ 7ರಂದು ಮತದಾನ ನಡೆದಿತ್ತು.ಆಡಳಿತಾರೂಢ
ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್), ವಿರೋಧ ಪಕ್ಷವಾದ ಜೋರಾಮ್ ಪೀಪಲ್ಸ್ ಪಾರ್ಟಿ (ಜೆಡ್ಪಿಎಂ) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ನಡೆಯುತಿದೆ.
ಮಿಜೋರಾಂ ವಿಧಾನಸಭೆ 40 ಸದಸ್ಯ ಬಲವನ್ನು ಹೊಂದಿದೆ. ಮಧ್ಯ ಪ್ರದೇಶ, ರಾಜಸ್ತಾನ, ಛತ್ತೀಸ್ ಗಢ ಹಾಗು ತೆಲಂಗಾಣಗಳ ಜೊತೆಗೆ ಮಿಝೋರಾಂ ಗೆ ಚುನಾವಣೆ ನಡೆದಿತ್ತು. ಆ ನಾಲ್ಕು ರಾಜ್ಯಗಳಲ್ಲಿ ನಿನ್ನೆ ಮತ ಎಣಿಕೆ ನಡೆದಿತ್ತು. ಮಿಜೋರಾಂ ನಲ್ಲಿ ಇವತ್ತು ಮತ ಎಣಿಕೆ ನಡೆಯುತ್ತಿದೆ. ಎಂ ಎನ್ ಎಫ್ 4 ಸ್ಥಾನಗಳಲ್ಲಿ ಹಾಗು ಝಡ್ ಪಿ ಎಂ 3 ಸ್ಥಾನಗಳಲ್ಲಿ ಮುನ್ನಡೆ ಆರಂಭಿಕ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.












