ಸುಳ್ಯ:ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹುಟ್ಟುಹಬ್ಬವನ್ನು ಸುಳ್ಯದ ಕಾಂಗ್ರೆಸ್ ಮುಖಂಡರು ಆಚರಿಸಿದರು. ಕೇಕ್ ಕತ್ತರಿಸಿ, ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿ ಆಚರಿಸಲಾಯಿತು. ಕೆಪಿಸಿಸಿ ವಕ್ತಾರ ಟಿ.ಎಂ. ಶಹಿದ್ ತೆಕ್ಕಿಲ್ ಕೇಕ್ ಕತ್ತರಿಸಿದರು. ಈ ಸಂದರ್ಭದಲ್ಲಿ
ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಸಿದ್ದಿಕ್ ಕೊಕ್ಕೊ, ಬ್ಲಾಕ್ ಕಾಂಗ್ರೇಸ್ ಮೈನಾರಿಟಿ ಉಪಾಧ್ಯಕ್ಷ ಹನೀಫ್ ಬೀಜಕೊಚ್ಚಿ,ಮನ್ಸೂರ್ ಮೆಟ್ರೋ, ನಾಸಿರ್ ಕಮ್ಮಾಡಿ,ಅನ್ವರ್ ಕುಂಬ್ಳೆಕಾರ್ಸ್ ಉಪಸ್ಥಿತರಿದ್ದರು.
ಮಿಥುನ್ ರೈ ಹುಟ್ಟು ಹಬ್ಬ ಪ್ರಯುಕ್ತ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಪುಟಾಣಿ ಮಕ್ಕಳಿಗೆ ಸಿಹಿ ತಿಂಡಿ ಹಂಚಿದರು.