ಮಂಗಳೂರು :ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಅವರ 5 ನೇ ಊರೂಸ್ ಸಮಾರಂಭದ ಪ್ರಯುಕ್ತ ನಡೆದ ಸೌಹಾರ್ದ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಭಾಗವಹಿಸಿದ್ದರು. ಜಬ್ಬಾರ್ ಉಸ್ತಾದ್ ಅವರ ಜೀವನ ಶೈಲಿ ನಡೆ ನುಡಿ ಮತ್ತು ಪಾಂಡಿತ್ಯ ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದ್ದು ಲಕ್ಷದೀಪದಿಂದ
ಮಿತ್ತಬೈಲಿಗೆ ಬಂದು ಸಮಸ್ತದ ಮುಶಾವರ ಸಭೆಯ ಸದಸ್ಯರಾಗಿ ಕರ್ನಾಟಕ ಕೇರಳ ತಮಿಳುನಾಡು ಆಂಧ್ರಪ್ರದೇಶ ಮಹಾರಾಷ್ಟ್ರ ಸಹಿತ ದೇಶ ವಿದೇಶಗಲ್ಲಿ ಅಪಾರ ಶಿಷ್ಯ ವೃಂದ ಹೊಂದಿರುವ ಅವರ ಸೇವೆಯನ್ನು ಸ್ಮರಿಸಿದರು. ಲಕ್ಷದೀಪ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮಾಜಿ ಸಂಸತ್ ಸದಸ್ಯ ಹಮ್ದುಲ್ಲ ಸಯೀದ್ ಅವರು ಟಿ ಎಂ ಶಾಹಿದ್ ತೆಕ್ಕಿಲ್ ಅವರನ್ನು ಸನ್ಮಾನಿಸಿದರು. ಸಮಾರಂಭದಲ್ಲಿ, ನೌಶಾದ್ ಬಾಖವಿ, ಇರ್ಷಾದ ದಾರಿಮಿ ಮಿತ್ತಬೈಲ್, ರಮಾನಾಥ್ ರೈ, ಎಸ್ ಬಿ ದಾರಿಮಿ,ಇನಾಯತ್ ಅಲಿ ಮೂಲ್ಕಿ,ಅನೀಸ್ ಕೌಸರಿ,ಲುಕ್ಮಾನ್ ಬಂಟ್ವಾಳ್,ಲತೀಫ್ ಗುರುಪುರ, ಶರೀಫ್ ಬಂಟ್ವಾಳ್,ಫೈರೋಸ್ ಕಲ್ಲಡ್ಕ, ಸಿದ್ದೀಕ್ ಕೊಕೊ ಮೊದಲಾದವರು ಉಷ್ಠಿತರಿದ್ದರು









