ಸುಳ್ಯ: ನ.30ರಂದು ಉದ್ಘಾಟನೆಯಾಗಲಿರುವ ಸುಳ್ಯ ಪ್ರೆಸ್ ಕ್ಲಬ್‌ನ ನೂತನ ಕಟ್ಟಡವನ್ನು ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ ವೀಕ್ಷಿಸಿದರು. ನ.10ರಂದು ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದ ಸಚಿವರು
ಮೆಚ್ಚುಗೆ ವ್ಯಕ್ತ ಪಡಿಸಿದರು. ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಮತ್ತಿತರರು ಸಚಿವರ ಜೊತೆಗಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ನಿರ್ದೇಶಕರಾದ ಜೆ.ಕೆ.ರೈ, ಗಂಗಾಧರ ಮಟ್ಟಿ, ಸದಸ್ಯರಾದ ಪದ್ಮನಾಭ ಮುಂಡೋಕಜೆ, ತೇಜೇಶ್ವರ ಕುಂದಲ್ಪಾಡಿ, ಹಸೈನಾರ್ ಜಯನಗರ, ಸತೀಶ್ ಹೊದ್ದೆಟ್ಟಿ, ಪದ್ಮನಾಭ ಅರಂಬೂರು ಮತ್ತಿತರರು ಸಚಿವರನ್ನು ಸ್ವಾಗತಿಸಿದರು. ಸಚಿವರ ಆಪ್ತ ಕಾರ್ಯದರ್ಶಿ ಸಂಜೀವ, ಜೀತು ನಿಡ್ಲೆ ಮತ್ತಿತರರು ಉಪಸ್ಥಿತರಿದ್ದರು.