ಬೆಳ್ಳಾರೆ:ಹಝ್ರತ್ ವಲಿಯುಲ್ಲಾಹಿ ಬೆಳ್ಳಾರೆ ಮಖಾಂ ಉರೂಸ್ ಸಮಾರಂಭಕ್ಕೆ ಆರೋಗ್ಯ ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಜ.23ರಂದು ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉರೂಸ್ ಸಮಿತಿ ಹಾಗೂ ಜುಮಾ ಮಸೀದಿ ಆಡಳಿತ ಸಮಿತಿ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು.
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಶರೀಫ್ ಕಂಠಿ, ಶಾಫಿ ಕುತ್ತಮೊಟ್ಟೆ, ಶಹೀದ್ ಪಾರೆ ಮತ್ತಿತರರು ಉಪಸ್ಥಿತರಿದ್ದರು.ಝಕರಿಯಾ ಜುಮಾ ಮಸೀದಿಯ
ಆಡಳಿತ ಸಮಿತಿ ಅಧ್ಯಕ್ಷ ಯು. ಹೆಚ್ ಅಬೂಬಕ್ಕರ್ ಹಾಜಿ ಮಂಗಳ, ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕಲ್ಲಪಣೆ, ಕೋಶಾಧಿಕಾರಿ ನಾಶೀರ್ ಯು.ಪಿ ಬಿಝ್, ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಯು.ಪಿ. ಬಶೀರ್ ಬೆಳ್ಳಾರೆ,ಉರೂಸ್ ಸಮಿತಿ ಕೋಶಾಧಿಕಾರಿ ಝಕರಿಯಾ ನಿಡ್ಮಾರ್,ಉರೂಸ್ ಸಮಿತಿ ಉಪಾಧ್ಯಕ್ಷ ಜಮಾಲುದ್ದೀನ್ ಕೆ.ಎಸ್, ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ನಿರ್ದೇಶಕರಾದ ಬಶೀರ್. ಕೆ.ಎ, ಇಸ್ಮಾಯಿಲ್ ಬಿ,ಹಸೈನಾರ್. ಬಿ, ಹನೀಫ್ ನೆಟ್ಟಾರು, ಹಮೀದ್ ಹೆಚ್ ಎಂ,ಹಮೀದ್ ಅಲ್ಪಾ, ಉಸ್ಮಾನ್ ಹಾಜಿ, ಅಜರುದ್ದೀನ್ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.










