ಅರಂತೋಡು: ಪೌರಾಡಳಿತ ಮತ್ತು ಹಜ್ಜ್ ಸಚಿವರಾದ ರಹೀಂ ಖಾನ್ ಅರಂತೋಡು ಟಿ.ಎಂ ಶಹೀದ್ ತೆಕ್ಕಿಲ್ ಅವರ ತೆಕ್ಕಿಲ್ ನಿವಾಸಕ್ಕೆ ಭೇಟಿ ನೀಡಿದರು.ಈ ಸಂಧರ್ಭದಲ್ಲಿ ಅವರನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ
ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು.ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕೆ.ಎಸ್ ಉಮ್ಮರ್ ಸಿದ್ಧೀಕ್ ಕೊಕ್ಕೊ, ಶರೀಫ್ ಕಂಠಿ, ಪ್ರಮುಖರಾದ ಎಸ್. ಸಂಶುದ್ಧೀನ್, ಸಲೀಂ ಪೆರಂಗೋಡಿ, ಕೆ.ಬಿ ಇಬ್ರಾಹಿಂ, ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಕೋಶಾಧಿಕಾರಿ ಟಿ.ಎಮ್ ಜಾವೇದ್ ತೆಕ್ಕಿಲ್,ಬಶೀರ್ ಕಚ್ಚು, ತಾಜುದ್ಧೀನ್ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು.





