ಸುಳ್ಯ:ಕರ್ನಾಟಕ ಸರಕಾರದ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ಅವರು ಜ.17ರಂದು ಸುಳ್ಯ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಮಧ್ಯಾಹ್ನದ ಬಳಿಕ 3.30ಕ್ಜೆ ಪಂಜಕ್ಕೆ ಆಗಮಿಸುವ ಅವರು
ಯುವಜನ ಸಂಯುಕ್ತ ಮಂಡಳಿ ಆಶ್ರಯದಲ್ಲಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ’ಯುವ ಸಂಭ್ರಮ-2026′ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5ಕ್ಕೆ ಎಣ್ಮೂರು ಮಖಾಂ ಉರೂಸ್ ಪ್ರಯುಕ್ತ ನಡೆಯುವ ಉಮರಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 6.30ಕ್ಕೆ ಸಚಿವರು ಕಾಸರಗೋಡಿಗೆ ತೆರಳಲಿದ್ದಾರೆ.












