ಸುಳ್ಯ: ವಿಧಾನಸಭಾ ಚುನಾವಣೆ, ಲೋಕಸಭೆ ಚುನಾವಣೆ, ಸ್ಥಳೀಯ ಆಡಳಿತ ಚುನಾವಣೆ ಹೀಗೆ ಎಲ್ಲದರಲ್ಲಿಯೂ ಸುಳ್ಯದಲ್ಲಿ ಓಟು ಪಡೆದು ಗೆಲ್ಲುವ ಬಿಜೆಪಿಯವರಿಗೆ ಸ್ವಲ್ಪ ಕೇಳಿ.. ಸುಳ್ಯದಲ್ಲಿ ಅಭಿವೃದ್ಧಿ ಯಾಕೆ ಆಗಿಲ್ಲಾ.. ಯಾಕೆ ಈ ರೀತಿಯ ಅವ್ಯವಸ್ಥೆ. ಸುಳ್ಯ ಯಾಕೆ ಹಿಂದೆ ಬಿದ್ದಿದೆ ಎಂದು… ಸುಳ್ಯದ ವಿವಿಧ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಕೇಳಿದ
ಪ್ರಶ್ನೆಗೆ ಸಚಿವ ದಿನೇಶ್ ಗುಂಡೂರಾವ್ ನೀಡಿದ ಉತ್ತರ ಹೀಗಿತ್ತು..! ಸುಳ್ಯ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯ ಡಾಕ್ಟರ್ಗಳ ಕೊರತೆ, ಸಿಬ್ಬಂದಿಗಳ ಕೊರತೆಯ ಬಗ್ಗೆ ಪತ್ರಕರ್ತರು ಸಚಿವರಲ್ಲಿ ಕೇಳಿದ ಸಂದರ್ಭದಲ್ಲಿ ಸಚಿವರು ಈ ರೀತಿ ಉತ್ತರ ನೀಡಿದರು. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಅವರಲ್ಲಿ ಇದರ ಬಗ್ಗೆ ಕೇಳಿದ್ದೇವೆ. ಈಗ ನೀವು ಅಧಿಕಾರದಲ್ಲಿ ಇದ್ದೀರಿ ಅದಕ್ಕಾಗಿ ನಿಮ್ಮಲ್ಲಿ ಕೇಳುತ್ತೇವೆ ಎಂದು ಪತ್ರಕರ್ತರು ಸಚಿವರಿಗೆ ಹೇಳಿದರು.ಕಳೆದ 5 ವರ್ಷಗಳಲ್ಲಿ ಬಿಜೆಪಿ ಅಧಿಕಾರದಲ್ಲಿ ಯಾವುದೇ ನೇಮಕಾತಿ ಮಾಡದ ಕಾರಣ ಈಗ ಹುದ್ದೆಗಳು ಖಾಲಿ ಬಿದ್ದಿದೆ ಎಂದು ಸಚಿವರು ಟಾಂಗ್ ನೀಡಿದರು.
ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ನೇಮಕ ಆಗದ ಬಗ್ಗೆ ಸಚಿವರು ಪ್ರಶ್ನಿಸಿದರು. ಅರೋಗ್ಯ ರಕ್ಷಾ ಸಮಿತಿ ಸದಸ್ಯರ ನೇಮಕಕ್ಕೆ ಪಟ್ಟಿ ಯಾಕೆ ಕಳಿಸಿಲ್ಲಾ ಎಂದು ಸಚಿವರು ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದರು. ಕೂಡಲೇ ಪಟ್ಟಿ ಕಳಿಸಿ ಎಂದು ಅವರು ಸೂಚಿಸಿದರು.