ಬೆಂಗಳೂರು: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್) ನಂದಿನಿ ಹಾಲಿನ ದರವನ್ನು ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು ನಾಳೆ(ಜೂನ್ 26)ಯಿಂದ ಜಾರಿಗೆ ಬರಲಿವೆ.
ನಂದಿನಿಯ ಎಲ್ಲ ಮಾದರಿಗಳ ಹಾಲಿನ ದರವನ್ನು ಪ್ರತಿ ಲೀಟರ್ಗೆ 2 ರೂಹೆಚ್ಚಿಸಿ ಪರಿಷ್ಕರಿಸಲಾಗಿದೆ ಎಂದು
ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ದರ ಪರಿಷ್ಕರಣೆಗೊಂಡ ನಂತರ ಅರ್ಧ ಲೀಟರ್ ಹಾಲಿನ ದರ 22ರಿಂದ 24ಕ್ಕೆ ಹೆಚ್ಚಿಸಲಾಗಿದೆ. ಆದರೆ, ಗ್ರಾಹಕರಿಗೆ ಸಿಗುತ್ತಿದ್ದ 1 ಲೀಟರ್ (1 ಸಾವಿರ ಎಂ.ಎಲ್) ಹಾಗೂ ಅರ್ಧ ಲೀಟರ್ (500 ಎಂ.ಎಲ್) ಹಾಲು ಇನ್ನು ಮುಂದೆ ಕ್ರಮವಾಗಿ 1050 ಎಂ.ಎಲ್ ಹಾಗೂ 550 ಎಂ.ಎಲ್. ಸಿಗಲಿದೆ. ಅಂದರೆ 50 ಎಂ.ಎಲ್ ಹಾಲು ಹೆಚ್ಚುವರಿಯಾಗಿ ಸಿಗಲಿದೆ ಎಂದು ಅವರು ತಿಳಿಸಿದರು.