ಗೂನಡ್ಕ:ಗೂನಡ್ಕ ಸಜ್ಜನ ಸಮುದಾಯ ಭವನದಲ್ಲಿ 6 ಜಮಾಅತ್ ವ್ಯಾಪ್ತಿಯ 7 ಮದ್ರಸಾಗಳ ಬೃಹತ್ ಮಿಲಾದ್ ಸಂಗಮ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮೊದಲು ಪೇರಡ್ಕ ದರ್ಗಾ ಶರೀಫ್ ಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಜ್ಜನ ಸಮುದಾಯ ಭವನದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆಯಲ್ಲಿ 7ಮದ್ರಸಾ ವಿದ್ಯಾರ್ಥಿಗಳ
ವಿವಿಧ ಸ್ಪರ್ಧೆ ನಡೆಯಿತು.ಮಕ್ಕಳ ಬುರ್ಧಾ ಮಜ್ಲಿಸ್ ದಫ್ ಸ್ಪರ್ಧೆ, ರಿಮಿಕ್ಸ್ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ
6ಜಮಾಅತ್ ವ್ಯಾಪ್ತಿಯ ಹಿರಿಯರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾದನೆ ಮಾಡಿದವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಜುಮ್ಮಾ ಮಸೀದಿ ಅಧ್ಯಕ್ಷರಾದ ಟಿ. ಎಂ ಶಾಹಿದ್ ತೆಕ್ಕಿಲ್, ಹಾಜಿ ಅಶ್ರಫ್ ಗುಂಡಿ,ಮಹಮ್ಮದ್ ಕುಂಞಿ, ಎಸ್. ಆಲಿ ಹಾಜಿ. ಮಹಮ್ಮದ್ ಹಮೀದಿಯ, ಹಾಜಿ ಎಸ್ ಮೊಯ್ದೀನ್ ಕುಂಞಿ ವಿವಿಧ ಮಸೀದಿಯ ಖತೀಬ್ ಉಸ್ತಾದರಾದ ಇಸ್ಮಾಯಿಲ್ ಫೈಝಿ ಗಟ್ಟಿಮನೆ ಅರಂತೋಡು, ನಹೀಂ ಫೈಝಿ ಪೇರಡ್ಕ, ಲುಕ್ಮನೂಲ್ ಹಕೀಮ್ ಸಂಪಾಜೆ. ಜಲೀಲ್ ಸಖಾಫಿ ದೇವರಕೊಲ್ಲಿ ಕೊಯ್ನಾಡ್ ಹಾಜಿ ಸಿದ್ದೀಕ್ ಝೌರಿ. ಕಲ್ಲುಗುಂಡಿ ಜುಮಾ ಮಸೀದಿ ಖತೀಬ್ ನಾಸಿರ್ ದಾರಿಮಿ, ಮಿಲಾದ್ ಸಮಿತಿಯ ವಿವಿಧ ಸಮಿತಿ ಅಧ್ಯಕ್ಷರಾದ ತಾಜ್ ಮಹಮ್ಮದ್, ರಫೀಕ್ ಕರಾವಳಿ, ಫೈಝಲ್ ಕಟ್ಟೆಕಾರ್, ಅಬ್ದುಲ್ ರಹಿಮಾನ್ ಸಂಕೇಶ್.ಶರೀಫ್ ಜಟ್ಟಿಪಳ್ಳ,ಇರ್ಷಾದ್ ಬದ್ರಿಯಾ, ಸಂಪಾಜೆ ಪಂಚಾಯತ್ ಉಪಾಧ್ಯಕ್ಷ ಎಸ್ ಕೆ ಹನೀಫ್, ಅಶ್ರಫ್ ಹಾಜಿ ಸಂಟ್ಯಾರ್ ಅಶ್ರಫ್, ರಜಾಕ್ ಸೂಪರ್, ಹಸೈನಾರ್ ಚಟ್ಟೆಕಲ್ಲು, ಅಬ್ದುಲ್ಲ ಹಾಜಿ ಕೊಪ್ಪತಕಜೆ ಅಬುಸಾಲಿ ಪಿ.ಕೆ.ಖಾದರ್ ಕುಂಬಕೋಡ್ . ಉಮ್ಮರ್ ಪುತ್ರಿ.ಹ್ಯಾರೀಸ್ ಜಮ.ಝಂ, ಅಮೀರ್ ಕುಕ್ಕುಂಬಳ,ಉನೈಸ್ ಗೂನಡ್ಕ ಅಬ್ದುಲ್ ರಹಿಮಾನ್ ಎಸ್.ಪಿ ಅಬ್ಬಾಸ್ ಕೆ. ಕೆ ಸಂಪಾಜೆ. ಅಬ್ದುಲ್ ಖಾದರ್ ಎ. ಎ. ಅಬ್ದುಲ್ ರಝಾಕ್ ಕೊಯ್ನಾಡ್. ಹನೀಫ್ ಟಿ. ಬಿ.. ರಫೀಕ್ ಕೆ. ಎಂ. ತಾಜ್ ಟರ್ಲಿ, ತಾಜುದ್ದೀನ್ ಅರಂತೋಡು,
ಉಪಸ್ತಿತರಿದ್ದರು ಮಿಲಾದ್ ಸಮಿತಿ ಪ್ರದಾನ ಕಾರ್ಯದರ್ಶಿ ಜಿ ಕೆ ಹಮೀದ್ ಗೂನಡ್ಕ ಸ್ವಾಗತಿಸಿ, ಎಸ್ .ಕೆ .ಹನೀಫ್ ವಂದಿಸಿದರು.ಖತೀಬರಾದ ನಹೀಂ ಫೈಝಿ ಲುಕ್ಮನೂಲ್ ಹಕೀಮ್ ಕಾರ್ಯಕ್ರಮ ನಿರೂಪಿಸಿದರು.





