ಸುಳ್ಯ:ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ಪ್ರವಾದಿ ಸಂದೇಶ ಸಾರಿದ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ ಮತ್ತು ಸಭಾ ಕಾರ್ಯಕ್ರಮ ಸೆ.13 ರಂದು ಗಾಂಧಿನಗರದಲ್ಲಿ ನಡೆಯಿತು.ಸಾರ್ವಜನಿಕ ಸಭಾ ಕಾರ್ಯಕ್ರಮವನ್ನು ಸಯ್ಯದ್ ಕುಂಞಿಕೋಯ ತಂಙಳ್ ಸಅದಿ ನಾವೂರು ಉದ್ಘಾಟಿಸಿದರು. ಸಯ್ಯದ್ ತ್ವಾಹಿರ್ ಸಅದಿ ತಂಙಳ್ ದುಃವಾ ನೆರವೇರಿಸಿದರು.ಮುಖ್ಯ ಪ್ರಭಾಷಣ ಮಾಡಿದ
ಕೇರಳದ ಖ್ಯಾತ ವಾಗ್ಮಿ ನವಾಝ್ ಮನ್ನಾನಿ ತಿರುವನಂತಪುರಂ ಮಾತನಾಡಿ ‘ಪ್ರವಾದಿಯವರ ಮೇಲಿನ ಪ್ರೀತಿಯನ್ನು ನಾವುಗಳು ಅವರ ಆದರ್ಶ ಜೀವನ ಶೈಲಿಯನ್ನು ನಮ್ಮ ಜೀವನದಲ್ಲಿ ಅನುಸರಿಸುವ ಮೂಲಕ ಆಗಬೇಕು.ಸತ್ಯ ಮತ್ತು ಪ್ರೀತಿ, ಕರುಣೆಯ ಸಂಕೇತವೇ ಪ್ರವಾದಿ ಸಂದೇಶ ವಾಗಿದ್ದು ಪರಸ್ಪರ ಸಹೋದರತ್ವದ ಜೀವನದ ಮೂಲಕ ಅದನ್ನು ನಾವು ನಿರ್ವಹಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಖ್ಯಾತ ವಾಗ್ಮಿ ಎಸ್.ಎಂ. ಬಶೀರ್ ಅಹ್ಮದ್ ಮಂಜೇಶ್ವರ, ಹುಸೇನ್ ಅಹ್ಸನಿ ಅಲ್ ಮುಈನಿ ಮೂರ್ನಾಡ್, ರಿಯಾಝ್ ಕಡಂಬು ಮಾತನಾಡಿದರು.
ವೇದಿಕೆಯಲ್ಲಿ ಪ್ರಮುಖರಾದ ಟಿ.ಎಂ.ಶಹೀದ್ ತೆಕ್ಕಿಲ್, ಕೆ.ಎಂ.ಮುಸ್ತಫಾ ಜನತಾ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಅಬ್ದುಲ್ ಕಲಾಂ, ಮಹಮ್ಮದ್ ಕುಂಞಿ ಗೂನಡ್ಕ, ಅಬ್ದುಲ್ ಮಜೀದ್ ಜನತಾ, ಹಾಜಿ ಅಬೂಬಕ್ಕರ್ ಮಂಗಳ,ಎಸ್ ಸಂಶುದ್ದೀನ್ ಅರಂಬೂರು,ಹಾಜಿ ಇಬ್ರಾಹಿಂ ಕತ್ತರ್ ಮಂಡೆಕ್ಕೋಲು, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ಜಿ.ಕೆ.ಹಮೀದ್, ತಾಜ್ ಮಹಮ್ಮದ್ ಸಂಪಾಜೆ, ಹಮೀದ್ ಸುಣ್ಣಮೂಲೆ, ಅಬ್ದುಲ್ ಹಮೀದ್ ಬೀಜಕೊಚ್ಚಿ, ಅಬ್ದುಲ್ ರಜ್ಜಾಕ್ ಕರಾವಳಿ, ಹಾಜಿ ಬಿ ಎಂ ಅಬೂಬಕ್ಕರ್ ಹಾಗೂ ಧಾರ್ಮಿಕ, ಸಾಮಾಜಿಕ ನೇತಾರರು ಉಪಸ್ಥಿತರಿದ್ದರು.ಮಿಲಾದ್ ಸಮಿತಿ ಅಧ್ಯಕ್ಷ ಜುನೈದ್ ಎನ್ ಎ, ಸಂಚಾಲಕ ಕೆ.ಎಸ್.ಉಮ್ಮರ್, ಉಪಾಧ್ಯಕ್ಷರಾದ ರಶೀದ್ ಜಟ್ಟಿಪಳ್ಳ,ಕಾರ್ಯದರ್ಶಿ ಅಝೀಝ್ ಸಂಗಮ್, ಜೊತೆ ಕಾರ್ಯದರ್ಶಿ ಮುನಾಫರ್ ಸುಳ್ಯ, ಅಬ್ದುಲ್ ಖಾದರ್ ಸಂಗಂ,ಇಕ್ಬಾಲ್ ಸುಣ್ಣಮೂಲೆ, ಮಿರಾಝ್ ಸುಳ್ಯ,ನವಾಝ್ ಜಯನಗರ,ನೌಶಾದ್ ಕೆರೆಮೂಲೆ, ಹಾಗೂ ಸಮಿತಿ ಯ ಸರ್ವ ಸದಸ್ಯರುಗಳು ಸಹಕರಿಸಿದರು.
ಮೀಲಾದ್ ಸಮಿತಿ ಕೋಶಾಧಿಕಾರಿ ಉನೈಸ್ ಪೆರಾಜೆ ಸ್ವಾಗತಿಸಿ ಅಧ್ಯಕ್ಷ ಜುನೈದ್ ವಂದಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಆಕರ್ಷಕ ಮಿಲಾದ್ ಕಾಲ್ನಡಿಗೆ ಜಾಥಾ ನಡೆಯಿತು.












