ಸುಳ್ಯ: ಮೆಸ್ಕಾಂ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆ ನ.26 ಮೆಸ್ಕಾಂ ಸುಳ್ಯ ಉಪವಿಭಾಗ ಕಛೇರಿಯಲ್ಲಿ ನಡೆಯಿತು. ಸುಳ್ಯಕ್ಕೆ ಅನುಷ್ಠಾನಗೊಳ್ಳುತ್ತಿರುವ 110 ಕೆವಿ ಕಾಮಗಾರಿ ಪ್ರಗತಿಯ ಬಗ್ಗೆ ಗ್ರಾಹಕರು ಪ್ರಶ್ನೆ ಎತ್ತಿದರು. ಕಾಮಗಾರಿ ಯಾವಾಗ ಪೂರ್ತಿಗೊಳ್ಳುತ್ತದೆ ಎಂದು ಸಭೆಯಲ್ಲಿ ಪ್ರಶ್ನೆ ಎತ್ತಲಾಯಿತು. ಕಾಮಗಾರಿ ಪ್ರಗತಿಯಲ್ಲಿದ್ದು
90 ಟವರ್ಗಳು ನಿರ್ಮಾಣ ಆಗಬೇಕಾಗಿದ್ದು 4 ಟವರ್ ಕಾಮಗಾರಿ ಆಗಿದೆ. ಉಳಿದ ಟವರ್ ನಿರ್ಮಾಣ ಸಂದರ್ಭದಲ್ಲಿ ಕೆಲವಡೆ ಸಾರ್ವಜನಿಕರಿಂದ ವಿರೋಧ ಉಂಟಾಗಿದ್ದು ಅದನ್ನು ಸರಿಪಡಿಸಬೇಕಾಗಿದೆ ಎಂದು ಇಂಜಿನಿಯರ್ಗಳು ಉತ್ತರಿಸಿದರು. ವಾರದಲ್ಲಿ ಎರಡು ದಿನ ವಿದ್ಯುತ್ ಕಡಿತ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವುದರ ಬಗ್ಗೆ ಗ್ರಾಹಕರು ಗಮನ ಸೆಳೆದರು. ಮಾಡಾವಿನಿಂದ ಕಾವು ತನಕ 33 ಕೆವಿ ದ್ವಿಪಥ ಕಾಮಗಾರಿ ಕೈಗೊಳ್ಳುವ ಕಾರಣ ಕೆಲವು ವಾರದಲ್ಲಿ ಎರಡು ದಿನ ವಿದ್ಯುತ್ ಕಡಿತ ಆಗುತ್ತಿದೆ. ಕಾಮಗಾರಿ ಸದ್ಯದಲ್ಲಿಯೇ ಮುಗಿಯಲಿದ್ದು ಬಳಿಕ ಎರಡು ದಿನ ಕಡಿತ ಮಾಡಲಾಗುವುದಿಲ್ಲ ಎಂದು ಇಂಜಿನಿಯರ್ಗಳು ತಿಳಿಸಿದರು.
ಲೈನ್ಮೆನ್ಗಳ ನಿಯೋಜನೆ ಮನವಿ:
ಜಾಲ್ಸೂರು ಸೆಕ್ಷನ್ ಹಾಗೂ ಮಂಡೆಕೋಲು ಗ್ರಾಮದ ವಿಧ್ಯುತ್ ಸಮಸ್ಯೆಗಳ ಬಗ್ಗೆ ಹಾಗೂ ಖಾಯಂ ಲೈನ್ ಮ್ಯಾನ್ ಗಳನ್ನು ನೇಮಿಸುವಂತೆ ಆಗ್ರಹಿಸಿ ಮಂಡೆಕೋಲಿನ ವಿದ್ಯುತ್ ಬಳಕೆದಾರರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು. ಮುಂದಿನ ಎರಡು ತಿಂಗಳೊಳಗೆ ಲೈನ್ ಮ್ಯಾನ್ ಗಳ ಸಮಸ್ಯೆ ಪರಿಹರಿಸುವುದಾಗಿ ಈ ಸಂದರ್ಭದಲ್ಲಿ ಇಂಜಿನಿಯರ್ಗಳು ತಿಳಿಸಿದರು. ಪ್ರಮುಖರಾದ ಸುರೇಶ್ ಕಣೆಮರಡ್ಕ, ಶಿವಪ್ರಸಾದ್ ಉಗ್ರಾಣಿಮನೆ, ಬಾಲಚಂದ್ರ ದೇವರಗುಂಡ, ಚಂದ್ರಜಿತ್ ಮಾವಂಜಿ, ಅನಿಲ್ ತೋಟಪ್ಪಾಡಿ, ಪ್ರಖ್ಯಾತ್ ವಾಗ್ಲೆ, ನವೀನ್ ಮುರೂರು, ಪ್ರೀತೇಶ್ ಕಣೆಮರಡ್ಕ, ಲೋಕೇಶ್ ದೇವರಗುಂಡ ಮನವಿ ಸಲ್ಲಿಸಿದರು.
ಜನ ಸಂಪರ್ಕ ಸಭೆಯಲ್ಲಿ ಗ್ರಾಹಕರು ವಿವಿಧ ಸಮಸ್ಯೆಗಳನ್ನು, ಅಹವಾಲುಗಳನ್ನು ಸಲ್ಲಿಸಿದರು.ಸುಳ್ಯ ಶಾಂತಿನಗರ ಭಾಗದಲ್ಲಿ ನಗರ ಪಿಡರ್ ಬದಲಾಯಿಸಿ ಗ್ರಾಮೀಣ ಪಿಡೆರ್ ಮಾಡಿರುವುದರಿಂದ ವಿದ್ಯುತ್ ಸಮಸ್ಯೆ, ಕುಡಿಯುವ ನೀರಿಗೂ ಸಮಸ್ಯೆ ಆಗುತ್ತಿರುವ ಬಗ್ಗೆ ಮಾಜಿ ನಗರ ಪಂಚಯತ್ ಸದಸ್ಯ ನಝೀರ್ ಶಾಂತಿನಗರ, ಗೌತಮ್ ಸೇರ್ಕಜೆ ಹಾಗೂ ಸ್ಥಳೀಯರು ನಮಗೆ ನಗರ ಪಿಡರ್ ಸರಿ ಪಡಿಸುವಂತೆ ಆಗ್ರಹಿಸಿದರು. ರಾಧಾಕೃಷ್ಣ ಪರಿವಾರಕನಾ ಟ್ರಿ ಕಟ್ಟಿಂಗ್ ಹಾಗೂ ಇತರ ಸಮಸ್ಯೆ ಬಗ್ಗೆ ವಿವರಿಸಿ ಸರಿಪಡಿಸುವಂತೆ ಆಗ್ರಹಿಸಿದರು.
ಸಂಪಾಜೆ ವಿದ್ಯುತ್ ಸಮಸ್ಯೆ ಬಗ್ಗೆ ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಹಾಗೂ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ.ಹನೀಫ್ ಚರ್ಚಿಸಿದರು. ಸಂಪಾಜೆ ಕೇಬಲ್ ಫೀಡರ್ ಪದೇ ಪದೇ ವಿದ್ಯುತ್ ಇಲ್ಲದೆ ಈ ಭಾಗದ ಜನರಿಗೆ ಸಮಸ್ಯೆಯಾಗುತ್ತಿದ್ದು ಕೂಡಲೇ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು. ಅರಂಬೂರು ಬಳಿ ಪದೇ ಪದೇ ಕೇಬಲ್ ಸಮಸ್ಯೆ ಆಗುತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಇಂಜಿನಿಯರ್ಗಳು ಭರವಸೆ ನೀಡಿದರು. ಗೂನಡ್ಕ ಶಾರದಾ ಶಾಲಾ ಬಳಿ ಎಚ್. ಟಿ. ಲೈನ್ಗೆ ಕೇಬಲ್ ಅಳವಡಿಸುವುದು,ಜೆಒಸಿ ಅಳವಡಿಕೆ, ದುರಸ್ತಿ. ಗಡಿಕಲ್ಲು ವಿದ್ಯುತ್ ಪರಿವರ್ತಕದ ಎಲ್. ಟಿ ವಯರ್ ಬದಲಾವಣೆ ಕಡೆಪಾಲ ವಿದ್ಯುತ್ ಪರಿವರ್ತಕ ದುರಸ್ತಿ ಸಂಪಾಜೆ ಗ್ರಾಮಕ್ಕೆ ಸಂಬಂಧಪಟ್ಟ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಸಮಸ್ಯೆಗಳ ಪರಿಹಾರದ ಭರವಸೆಯನ್ನು ಇಂಜಿನಿಯರ್ಗಳು ತಿಳಿಸಿದರು. ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್, ಸುಳ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್, ಸುಳ್ಯ ಶಾಖೆಯ ಸಹಾಯಕ ಇಂಜಿನಿಯರ್ ಸುಪ್ರೀತ್ ಕುಮಾರ್ ಎಸ್, ಸಹಾಯಕ ಇಂಜಿನಿಯರ್ ಅಭಿಷೇಕ್, ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಇಂಜಿನಿಯರ್ಗಳಾದ ಹರಿಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.