ಸುಳ್ಯ:ಮೇನಾಲ ಶ್ರಿಕೃಷ್ಣ ಭಜನಾ ಮಂದಿರದ ವಾರ್ಷಿಕ ಮಹಾಸಭೆಯು ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಭಜನಾ ಮಂದಿರದ ನಿಕಟಪೂವಾಧ್ಯಕ್ಷ ಪ್ರಭೋದ್ ಶೆಟ್ಟಿ ಮೇನಾಲ ವಹಿಸಿದ್ದರು. ವೇದಿಕೆಯಲ್ಲಿ ಭಜನಾ ಮಂದಿರದ ಕಾರ್ಯದರ್ಶಿ ಸುಕುಮಾರ ಕಲ್ಲಗುಡ್ಡೆ ಹಾಗೂ
ಹಿರಿಯರಾದ ಕಿಟ್ಟಣ್ಣ ರೈ ಇರಂತಮಜಲು ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಬಾಲಕೃಷ್ಣ ಪಿ ಎಸ್ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಶ್ರೀಧರ್ ಶೆಟ್ಟಿ ಬೇಲ್ಯ, ಸುಧಾಕರ ರಾವ್ ಪಳ್ಳತ್ತಡ್ಕ, ಗುರುವಪ್ಪ ಪಳ್ಳತ್ತಡ್ಕ, ಅರ್ಚನಾ ಉದಯ ರೈ ಮೇನಾಲ, ಚಿತ್ರಾ ರಾಧೇಶ್ ಮೇನಾಲ, ಪ್ರಧಾನ ಕಾರ್ಯದರ್ಶಿಯಾಗಿ ದಿವಿತಾ ನಯನ್ ರೈ ಮೇನಾಲ, ಕರ್ಯದರ್ಶಿಗಳಾಗಿ ಬೇಬಿ ಸುಕುಮಾರ ಕಲ್ಲಗುಡ್ಡೆ, ಲೋಕೇಶ ಪಿ ಆರ್ ಪಳ್ಳತ್ತಡ್ಕ, ಖಜಾಂಜಿಯಾಗಿ ಕಿರಣ್ ರೈ ಬೇಲ್ಯ. ಗೌರವ ಸಲಹೆಗಾರರಾಗಿ ಕಿಟ್ಟಣ್ಣ ರೈ ಇರಂತಮಜಲು, ಶೇಷಪ್ಪ ಪಳ್ಳತ್ತಡ್ಕ, ನಾರಾಯಣ ಪಳ್ಳತ್ತಡ್ಕ, ಮುರಳೀಧರ ರೈ ಹಾಗೂ ಖಾಯಂ ಸದಸ್ಯರುಗಳನ್ನಾಗಿ ಒಟ್ಟು ಹತ್ತು ಜನ ಸದಸ್ಯರನ್ನು ನೇಮಕ ಮಾಡಲಾಯಿತು. ನಂತರ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಆಪ್ತ ರೈ ಪ್ರಾರ್ಥಿಸಿ, ಪ್ರಣಾಮ್ ಶೆಟ್ಟಿ ಸ್ವಾಗತಿಸಿದರು.ಸುಕುಮಾರ ಕಲ್ಲಗುಡ್ಡೆ ವಂದಿಸಿದರು.