ಅಜ್ಜಾವರ:ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದ ವಯನಾಟ್ ಕುಲವನ್ ದೈವಸ್ಥಾನದಲ್ಲಿ
ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಮಾರ್ಚ್ 5, 6 ಮತ್ತು 7ರಂದು ನಡೆಯಲಿದೆ. ಮಾ.5ರಂದು ವೈಭವದ ಹಸಿರುವಾಣಿ ಸಮರ್ಪಣೆಯೊಂದಿಗೆ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ವೈಭವದ ಹಸಿರುವಾಣಿ ಮೆರವಣಿಗೆ ನಡೆಯಿತು. ಅಜ್ಜಾವರ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಹಾಗೂ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ
ಪೂಜೆ ನಡೆಸಿ ಎರಡು ಕಡೆಯಿಂದ ವಾಹನ ಮೆರವಣಿಗೆಯ ಮೂಲಕ ದೈವಸ್ಥಾನಕ್ಕೆ ಆಗಮಿಸಿತು. ಎರಡೂ ಕಡೆಯಿಂದ ಆಗಮಿಸಿದ ಹಸಿರುವಾಣಿ ವಾಹನ ಮೆರವಣಿಗೆ ನಡೆಯಿತು. ಎರಡೂ ಕಡೆಯಿಂದ ಆಗಮಿಸಿದ ವಾಹನ ಮೆರವಣಿಗೆ ಮೇನಾಲದಲ್ಪಿ ಸಂಗಮಿಸಿ ಅಲ್ಲಿಂದ ಪಾದಯಾತ್ರೆಯಾಗಿ ತೆರಳಿ ದೈವಸ್ಥಾನಕ್ಕೆ ಹಸಿರುವಾಣಿ ಸಮರ್ಪಿಸಲಾಯಿತು.ಚೆಂಡೆ, ವಾದ್ಯ, ಮೇಳ, ಬಣ್ಣದ ಕೊಡೆ, ಗೊಂಬೆಗಳು ಆಕರ್ಷಕ ಮೆರವಣಿಗೆಗೆ ಸಾಥ್ ನೀಡಿದವು. ಬಳಿಕ ಕಲವರ ನಿರಕ್ಕಲ್(ಉಗ್ರಾಣ ತುಂಬುವುದು) ಕಾರ್ಯಕ್ರಮ ನಡೆಯಿತು.
ನೂರಾರು ಮಂದಿ ಭಾಗವಹಿಸಿದ್ದರು. ಚೆನ್ನಕೇಶವ ದೇವಸ್ಥಾನದಿಂದ ಹೊರಟ ಹಸಿರುವಾಣಿ ಮೆರವಣಿಗೆಗೆ ಡಾ.ಹರಪ್ರಸಾದ್ ತುದಿಯಡ್ಕ ಚಾಲನೆ ನೀಡಿದರು. ಅಜ್ಜಾವರ ಮಹಿಷಮರ್ಧಿನಿ ದೇವಸ್ಥಾನದಿಂದ ಹೊರಟ ಹಸಿರುವಾಣಿ ಮೆರವಣಿಗೆಗೆ ಭಾಸ್ಕರ ರೈ ಬಯಂಬು ಚಾಲನೆ ನೀಡಿದರು.
ಮಹೋತ್ಸವ ಸಮಿತಿ ಅಧ್ಯಕ್ಷ ಗುಡ್ಡಪ್ಪ ರೈ ಮೇನಾಲ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಪರಿವಾರಕಾನ,ಶ್ರೀಕ್ಷೇತ್ರ ಕುತ್ತಿಕೊಲು ಅಧ್ಯಕ್ಷ ಆರ್.ಕುಂಞಿಕಣ್ಣನ್, ಮಹೋತ್ಸವ ಸಮಿತಿಯ
ಸಂಘಟನಾ ಕಾರ್ಯದರ್ಶಿ ಗಿರಿಶಂಕರ ಸುಲಾಯ, ಕೋಶಾಧಿಕಾರಿ ರಾಮಕೃಷ್ಣ ರೈ ಮೇನಾಲ, ಸಂಚಾಲಕರಾದ ಸುಬೋದ್ ಶೆಟ್ಟಿ ಮೇನಾಲ, ಕಾರ್ಯಾಧ್ಯಕ್ಷರಾದ ರವೀಂದ್ರನಾಥ ರೈ ಮೇನಾಲ, ಜಗನ್ನಾಥ ರೈ ಮೇನಾಲ ಮುಂಬೈ, ಹರಿಪ್ರಕಾಶ್ ಗೌಡ ಕುರುಂಜಿ, ವಿಜಯಕುಮಾರ್ ತುದಿಯಡ್ಕ, ಸ್ಥಾನದ ಮನೆ ಅರ್ಚಕರಾದ ಯಂ.ಕೆ.ಕೃಷ್ಣ, ಪದಾಧಿಕಾರಿಗಳು, ಸಂಚಾಲಕರುಗಳು, ಸದಸ್ಯರುಗಳು, ಗ್ರಾಮಸ್ಥರು, ಮಹೋತ್ಸವ ಸಮಿತಿ, ಉಪಸಮಿತಿ, ಆಡಳಿತ ಸಮಿತಿ ಪದಾಧಿಕಾರಿಗಳು, ಮೇನಾಲ ಕುಟುಂಬಸ್ಥರು ಮತ್ತು ಪ್ರಮುಖರು ಉಪಸ್ಥಿತರಿದ್ದರು.